ಧಾರವಾಡ: ಧಾರವಾಡದ ಸಾರಸ್ವತಪುರ ಎನ್ಸಿಸಿ ಗೆಸ್ಟ್ ಹೌಸ್ ಬಳಿ ಮಳೆಯಿಂದಾಗಿ ಮರವೊಂದು ನೆಲಕ್ಕುರುಳಿದೆ.
ಈ ಮರ ವಿದ್ಯುತ್ ತಂತಿಯ ಮೇಲೆ ಬಿದ್ದಿದ್ದರಿಂದ ವಿದ್ಯುತ್ ತಂತಿಗಳು ತುಂಡರಿಸಿವೆ. ಈ ಮರ ಬಿದ್ದ ನಂತರ ಅಲ್ಲಿನ ನಿವಾಸಿಗಳು ಹೆಸ್ಕಾ ಹಾಗೂ ಪಾಲಿಕೆಗೆ ದೂರು ಸಹ ಕೊಟ್ಟಿದ್ದಾರೆ. ಸಾರ್ವಜನಿಕರು ದೂರು ಕೊಟ್ಟು ಅನೇಕ ಗಂಟೆ ಕಳೆದರೂ ಯಾವ ಸಿಬ್ಬಂದಿಯೂ ಸ್ಥಳಕ್ಕೆ ಭೇಟಿ ನೀಡಿಲ್ಲ.
ರಸ್ತೆ ಮಧ್ಯೆಯೇ ಮರ ಹಾಗೂ ವಿದ್ಯುತ್ ತಂತಿಗಳು ಬಿದ್ದಿದ್ದು, ಹೆಸ್ಕಾಂ ಸಿಬ್ಬಂದಿಯಾಗಲಿ ಹಾಗೂ ಪಾಲಿಕೆ ಸಿಬ್ಬಂದಿಯಾಗಲಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸದೇ ಇರುವುದು ಅಲ್ಲಿನ ನಿವಾಸಿಗಳ ಆಕ್ರೋಶಕ್ಕೆ ಕಾರಣವಾಗಿದೆ.
ಸ್ಲಗ್
ಹೆಸ್ಕಾಂ ನಿರ್ಲಕ್ಷ್ಯ
Kshetra Samachara
16/07/2022 08:37 pm