ಕುಂದಗೋಳ : ಇಲ್ಲೋಬ್ಬ ತಾಯಿ ಮಗ ಅತಿವೃಷ್ಟಿ ಪರಿಣಾಮ ವಾಸದ ಮನೆ ಕಳೆದುಕೊಂಡು ಪರಿಹಾರ ಕಾಣದೆ ತಹಶೀಲ್ದಾರ ಕಚೇರಿಗೆ ಬಂದು ತಹಶೀಲ್ದಾರ ದಾರಿ ಕಾಯ್ದು ಸುಸ್ತಾಗಿ ಮರಳಿ ಮನೆ ಸೇರಿದ್ದಾರೆ.
ಯಲಿವಾಳ ಗ್ರಾಮದ ಕುಬೇರಗೌಡ ಚಿಕ್ಕನಗೌಡ್ರ ಎಂಬುವವರ ಮನೆ 2020 ಮತ್ತು ಪ್ರಸಕ್ತ ವರ್ಷದ ಅತಿವೃಷ್ಟಿಗೆ ಸಿಲುಕಿ ಬಿದ್ದಿದೆ, ಕಳೆದ ವರ್ಷ ಅತಿವೃಷ್ಟಿ ಸಂದರ್ಭದಲ್ಲಿ ಮನೆ ಅಲ್ಪ ಮನೆ ಬಿದ್ದ ಪರಿಣಾಮ ಈ ಮಲ್ಲನಗೌಡ ಚಿಕ್ಕನಗೌಡ್ರ ಕುಟುಂಬದವರು ಪ್ರಾಣ ಭಯದಿಂದ ಬೇರೆ ಮನೆ ಸೇರಿದ್ದಾರೆ.
ಆದರೆ ಅಂದಿನ ಗ್ರಾಮ ಲೆಕ್ಕಾಧಿಕಾರಿ ಹಾಗೂ ಸಂಬಂಧಪಟ್ಟ ಅಧಿಕಾರಿಗಳು ಮನೆಯಲ್ಲಿ ವಾಸವಿಲ್ಲ, ಎಂದು ಮನೆ ಬಿದ್ದರೂ ಪರಿಹಾರ ನೀಡಿಲ್ಲ, ಪ್ರಸಕ್ತ ವರ್ಷ ಮನೆ ಬಿದ್ದರೂ ಈ ವರ್ಷದ ಗ್ರಾಮ ಲೆಕ್ಕಾಧಿಕಾರಿ ಹಳೇ ಕಡತ ನೋಡಿ ನೀವೂ ಮನೆಯಲ್ಲಿ ವಾಸವಿಲ್ಲ ಎಂದಿದ್ದಾರೆ, ಈ ವಿಚಾರ ತಿಳಿದು ತಹಶೀಲ್ದಾರ ಭೇಟಿ ಆಗಲು ಬಂದ ತಾಯಿ ಮಗ ತಹಶೀಲ್ದಾರ ದಾರಿ ಕಾಯ್ದು ಮರಳಿ ಮನೆ ಸೇರಿದ್ದಾರೆ.
ಈಗಾಗಲೇ ಮನೆ ಬಿದ್ದರೂ ನಾವೂ ವಾಸವಿಲ್ಲ ಎಂದು ಪರಿಹಾರ ನೀಡುತ್ತಿಲ್ಲಾ, ಈ ಬಗ್ಗೆ ಸಂಬಂಧಪಟ್ಟ ಮೇಲಾಧಿಕಾರಿಗಳು ಗಮನಿಸುವಂತೆ ಅತಿವೃಷ್ಟಿ ಸಿಲುಕಿ ಕಷ್ಟದಲ್ಲಿರುವ ಕುಬೇರಗೌಡ ಚಿಕ್ಕನಗೌಡ್ರ ಪಬ್ಲಿಕ್ ನೆಕ್ಸ್ಟ್ ಮೂಲಕ ಒತ್ತಾಯ ಮಾಡಿದ್ದಾರೆ.
Kshetra Samachara
24/12/2021 05:08 pm