ಕುಂದಗೋಳ : ಕಳೆದ ಎರಡು ದಿನಗಳಿಂದ ಸುರಿಯುತ್ತಿರುವ ಮಹಾಮಳೆ ಕಾರಣ ಕುಂದಗೋಳ ತಾಲೂಕಿನ ಎಲ್ಲೇಡೆ ಹಲವಾರು ಮನೆಗಳು ಹಾನಿಯಾಗಿವೆ. ಈ ಹಿನ್ನೆಲೆಯಲ್ಲಿ ಇಂದು ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿ ಮಹೇಶ್ ಕುರಿಯವರ ಜೊತೆ ಅತಿವೃಷ್ಟಿ ನೋಡಲ್ ಅಧಿಕಾರಿ ತಾಲೂಕಿನ ಉಪಕಾರ್ಯದರ್ಶಿಗಗಳು ಪಶುಪತಿಹಾಳದಲ್ಲಿ ಹಾನಿಗೊಳಗಾದ ಮನೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಈ ವೇಳೆ ಕುಂದಗೋಳ ತಾಲೂಕಿನಲ್ಲಿ ಮನೆ ಬಿದ್ದ ನಿರಾಶ್ರಿತರಾದ ಹಳ್ಳಿಗರು ತಮ್ಮ ತಮ್ಮ ಪರಿಸ್ಥಿತಿಯನ್ನು ನೋಡಲ್ ಅಧಿಕಾರಿಗಳ ಮುಂದೆ ವಿವರಿಸಿ, ಪರಿಹಾರ ಮಂಜೂರು ಮಾಡುವಂತೆ ಮನವಿ ಮಾಡಿಕೊಂಡರು. ಕೆಲವರು ಮನೆ ಹಾನಿಯಾದ ಘಟನೆಗಳನ್ನು ಅಧಿಕಾರಿಗಳ ಮುಂದೆ ವಿವರಿಸಿ ಕಣ್ಣೀರಿಟ್ಟರು. ಈ ಸಂದರ್ಭದಲ್ಲಿ ಪಶುಪತಿಹಾಳ ಅಭಿವೃದ್ಧಿ ಅಧಿಕಾರಿ ರತ್ನಾಕರ, ಗ್ರಾಮ ಲೆಕ್ಕಾಧಿಕಾರಿಗಳು ಹಾಗೂ ಗ್ರಾಮ ಪಂಚಾಯಿತಿ ಸರ್ವ ಸದಸ್ಯರು ಗ್ರಾಮದ ಹಿರಿಯರು ಉಪಸ್ಥಿತರಿದ್ದರು.
Kshetra Samachara
20/05/2022 11:26 pm