ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಗೋಳ : "ಬಂದ್" ಎಂಬ ಸುದ್ದಿ ಕೇಳಿಯೆ ಪ್ರಯಾಣಕ್ಕೆ ಪುಲ್ ಸ್ಟಾಪ್ ಇಟ್ಟ ಪ್ಯಾಸೆಂಜರ್ಸ್

ಕುಂದಗೋಳ : ಆಡಳಿತ ಸರ್ಕಾರ ಜಾರಿಗೆ ತಂದಿರುವ ಭೂ ಸುಧಾರಣೆ, ಎಪಿಎಂಸಿ ಕಾಯ್ದೆ ವಿರೋಧಿಸಿ ವಿವಿಧ ಸಂಘಟನೆಗಳು ನೀಡಿದ ಕರ್ನಾಟಕ ಬಂದ್ ಗೆ ಕುಂದಗೋಳ ಪಟ್ಟಣಲ್ಲೂ ವಿವಿಧ ಸಂಘಟನೆಗಳು ಪ್ರತಿಭಟನೆ ಕೈಗೊಂಡಿದ್ದು ಎಂದಿನಂತೆ ಬಸ್ಸ್ ಸಂಚಾರ ಆರಂಭವಿದ್ರೂ ಬಸ್ಸ್ ನಿಲ್ದಾಣ ಬಿಕೋ ಎನ್ನುತ್ತಿದೆ.

ಹೌದು ! ಸಂಪೂರ್ಣ ಬಸ್ ನಿಲ್ದಾಣದಲ್ಲಿ ಕೇವಲ ಬೆರಳೆಣಿಕೆಯಷ್ಟೇ ಜನರು ಮಾತ್ರ ಕಂಡು ಬರುತ್ತಿದ್ದು ಇಂದು ಕುಂದಗೋಳ ಗ್ರಾಮೀಣ ಸಾರಿಗೆ ವಿಭಾಗಕ್ಕೆ ಲಾಸ್ ಎಂದೇ ಹೇಳಬಹುದು.

ಬೆಳಿಗ್ಗೆಯಿಂದ ಮಧ್ಯಾಹ್ನ ಕಳದ್ರೂ ಹುಬ್ಬಳ್ಳಿಯಿಂದ ಆಗಮಿಸಿದ ಬಸ್ಸ್ ಗಳು ಖಾಲಿ ಬರುತ್ತಿದ್ದು ಬಂದ್ ಎಂಬ ಸುದ್ದಿ ಕೇಳಿಯೆ ಕುಂದಗೋಳ ತಾಲೂಕಿನ ಹಳ್ಳಿಯ ಜನರು ಇಂದು ತಮ್ಮ ಪ್ರಯಾಣಕ್ಕೆ ಪುಲ್ ಸ್ಟಾಪ್ ಹೇಳಿದ್ದು ಗ್ರಾಮೀಣ ಸಾರಿಗೆ ಬಸ್ ನಿಲ್ದಾಣಕ್ಕೆ ಆಗಮಿಸಿದ ಬಸ್ಸುಗಳು ಪ್ರಯಾಣಿಕರಿಲ್ಲದ ಕಾರಣ ಬಸ್ಸ್ ನಿಲ್ದಾಣದದಲ್ಲಿ ಖಾಲಿ ನಿಂತಿವೆ.

Edited By : Nagesh Gaonkar
Kshetra Samachara

Kshetra Samachara

28/09/2020 03:44 pm

Cinque Terre

40.45 K

Cinque Terre

1

ಸಂಬಂಧಿತ ಸುದ್ದಿ