ಕಲಘಟಗಿ : ಭೂ ಕಾಯ್ದೆ,ಎಪಿಎಂಸಿ ಕಾಯ್ದೆ,ವಿದ್ಯುತ್ ಕಾಯ್ದೆ ಸೇರಿದಂತೆ ರೈತರಿಗೆ ಮಾರಕವಾದ ಕಾಯ್ದೆ ವಿರೋಧಿಸಿ ವಿವಿಧ ಸಂಘಟನೆಗಳು ರಾಷ್ಟ್ರೀಯ ಹೆದ್ದಾರಿ ತಡೆ ನಡೆಸಿ ಬಂದ್ ಗೆ ಬೆಂಬಲಿಸಿ ಸರಕಾರಕ್ಕೆ ಬಿಸಿ ಮುಟ್ಟಿಸಿದವು.
ಕಬ್ಬು ಬೆಳೆಗಾರ ಸಂಘಟನೆ,ಪಂಪಸೆಟ್ ಬಳಕೆದಾರ ಹಾಗೂ ರೈತಸಂಘ,ಹಸಿರು ಸೇನೆ,ಕರ್ನಾಟಕ ಸಂಗ್ರಾಮ ಸೇನೆ,ಡಿ ಎಸ್ ಎಸ್,ಜಯ ಕರ್ನಾಟಕ ಸಂಘಟನೆಗಳು ಹೆದ್ದಾರಿ ಬಂದ್ ಮಾಡಿ ಆಕ್ರೋಶ ವ್ಯಕ್ತಪಡಿಸಿದರು.
ಪಂಪಸೆಟ್ ಬಳಕೆದಾರ ಸಂಘದ ಜಿಲ್ಲಾ ಅಧ್ಯಕ್ಷ ಉಳವಪ್ಪ ಬಳಗೇರ ಮಾತನಾಡಿ, ಪ್ರಧಾನಿ ಮೋದಿಗೆ
ರೈತರ ಕುರಿತು ಕಳಕಳಿ ಇದ್ದರೆ,ಬೆಳೆಗೆ ವೈಜ್ಞಾನಿಕ ಬೆಲೆ ನೀಡಲಿ ಎಂದು ಸವಾಲು ಹಾಕಿದರು.
ರಾಜ್ಯ ಕಬ್ಬು ಬೆಳೆಗಾರರ ಸಂಘದ ಜಿಲ್ಲಾ ಅಧ್ಯಕ್ಷ ನಿಜಗುಣಿ ಕೆಲಗೇರಿ ಮಾತನಾಡಿ, ಕೇಂದ್ರ ಹಾಗೂ ರಾಜ್ಯಗಳು ರೈತರೊಂದಿಗೆ ಚರ್ಚಿಸದೆ ಜಾರಿಗೆ ತಂದಿರುವ ಭೂ ಕಾಯ್ದೆ,ಎಪಿಎಂಸಿ ಕಾಯ್ದೆ,ವಿದ್ಯುತ್ ಕಾಯ್ದೆಗಳನ್ನು ಕೂಡಲೇ
ರದ್ದುಪಡಿಸುವಂತೆ ಒತ್ತಾಯಿಸಿದರು.ಒಂದು ಗಂಟೆಗೂ ಹೆಚ್ಚು ಹೆದ್ದಾರಿ ತಡೆ ಮಾಡಲಾಯಿತು.
ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಮಂಜುನಾಥ ಮುರಳ್ಳಿ,ಜಿಲ್ಲಾ ಉಪಾಧ್ಯಕ್ಷ ಲಿಂಗರಡ್ಡಿ ನಡುವಿನಮನಿ, ಡಿ ಎಸ್ ಎಸ್ ಚಂದ್ರಕಾಂತ ಎಸ್ ಕಾದ್ರೋಳ್ಳಿ ಬಣ ಸಂಘಟನೆ ಯುವ ಘಟಕ ರಾಜ್ಯಾಧ್ಯಕ್ಷ ಮಂಜುನಾಥ ಪ ದೂಡಮನಿ,ಶಂಕ್ರಪ್ಪ ತಿಪ್ಪಣ್ಣವರ,ಶರಣಪ್ಪ ಹೂಸಮನಿ,ಶರೀಫ್ ಹರಿಜನ,ನಿಂಗಮ್ಮ ಸವಣೂರು ಇದ್ದರು.
Kshetra Samachara
28/09/2020 02:11 pm