ಹುಬ್ಬಳ್ಳಿ: ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ 2020-21 ನೇ ಸಾಲಿನ ಎಸ್.ಎಫ್.ಸಿ ಮತ್ತು ಪಾಲಿಕೆ ಅನುದಾನದಡಿ ಶೇ. 40 ರಷ್ಟು ವ್ಯಕ್ತಿ ಸಂಬಂಧಿತ ಕಾರ್ಯಕ್ರಮದಲ್ಲಿ ವಿದ್ಯಾರ್ಥಿ ವೇತನ ಹಾಗೂ ಇತರೆ ಯೋಜನೆಗಳ ನೆರವಿಗಾಗಿ ಅರ್ಜಿ ಆಹ್ವಾನಿಸಿಲಾಗಿದೆ.
ಅರ್ಹ ಪಲಾನುಭವಿಗಳು ಸಂಬಂಧಪಟ್ಟ ಪಾಲಿಕೆ ವಲಯ ಕಚೇರಿಗಳಿಂದ ಯೋಜನೆಗೆ ಸಂಬಂಧಿಸಿದ ಕರ ಪತ್ರ ಹಾಗೂ ಅರ್ಜಿಗಳನ್ನು ಪಡೆದುಕೊಳ್ಳಬಹುದು. ಭರ್ತಿ ಮಾಡಿದ ಅರ್ಜಿಗಳನ್ನು ನಿಗದಿತ ದಾಖಲೆಗಳೊಂದಿಗೆ ದ್ವಿಪ್ರತಿಯಲ್ಲಿ ದಿನಾಂಕ 25-02-2021ರ ಸಂಜೆ 5 ಗಂಟೆಯ ಒಳಗಾಗಿ ವಲಯ ಕಚೇರಿಗಳಲ್ಲಿ ಸಲ್ಲಿಸಬಹುದು.
ಎಸ್.ಎಫ್.ಸಿ ಅನುದಾನದ ಶೇ. 17.15 ರಷ್ಟು ಪ.ಜಾತಿ ಹಾಗೂ ಶೇ.6.95 ರಷ್ಟು ಪ.ಪಂಗಡ ಕಾರ್ಯಕ್ರಮದಲ್ಲಿ ಪದವಿ, ಸ್ನಾತಕೋತ್ತರ, ತಾಂತ್ರಿಕ ಶಿಕ್ಷಣ ಕಲಿಯುತ್ತಿರುವ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ ನೀಡಲಾಗುವುದು. ಬಿ.ಪಿ.ಎಲ್ ಕಾರ್ಡು ಹೊಂದಿರುವ ಎಂ.ಬಿ.ಬಿ.ಎಸ್, ಬಿ.ಇ. ವ್ಯಾಸಾಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಕಂಪ್ಯೂಟರ್ ಹಾಗೂ ಲ್ಯಾಪ್‌ಟಾಪ್ ಖರೀದಿಸಲು ರೂ.40000 ಮೀರದಂತೆ ಸಹಾಯಧನ ನೀಡಲಾಗುವುದು. ಬಿ.ಪಿ.ಎಲ್ ಕಾರ್ಡು ಹೊಂದಿರುವ ಪ.ಜಾತಿಯವರಿಗೆ ಮೂಲ ಸೌಕರ್ಯ ಯೋಜನೆಯಡಿ ಕುಡಿಯುವ ನೀರಿನ ಸಂಪರ್ಕ ನೀಡಲಾಗುವುದು.
ಪಾಲಿಕೆ ಅನುದಾನದ ಶೇ.17.5 ರಷ್ಟು ಪ.ಜಾತಿ ಹಾಗೂ ಶೇ.6.95 ರಷ್ಟು ಪ.ಪಂಗಡ ಹಾಗೂ ಶೇ.7.25 ರಷ್ಟು ನಗರ ಪ್ರದೇಶದ ಇತರೆ ಬಡಜನರ (ಓ.ಬಿ.ಸಿ) ಕಾರ್ಯಕ್ರಮದಲ್ಲಿ, ಬಿ.ಪಿ.ಎಲ್ ಕಾರ್ಡು ಹೊಂದಿರುವರಿಗೆ ಮನೆ ರಿಪೇರಿಗೆ ರೂ.50000, ಶೌಚಾಲಯ ನಿರ್ಮಾಣಕ್ಕೆ ರೂ.9667, ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ ಹಾಗೂ ಕುಡಿಯುವ ನೀರಿನ ಸಂಪರ್ಕ ಕಲ್ಪಿಸಲಾಗುವುದು.
ಹೆಚ್ಚಿನ ಮಾಹಿತಿಗಾಗಿ ಪಾಲಿಕೆ ವಲಯ ಕಚೇರಿ ಸಂಪರ್ಕಿಸಬೇಕೆಂದು ಆಯುಕ್ತ ಡಾ. ಸುರೇಶ ಇಟ್ನಾಳ್ ತಿಳಿಸಿದ್ದಾರೆ.
Kshetra Samachara
20/01/2021 05:05 pm