ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಗೋಳ : ಸ್ವಚ್ಛತೆಗಾಗಿ ಬೆಳಂ ಬೆಳಿಗ್ಗೆಯೇ ಪೂರಕೆ ಹಿಡಿದು ಶೌರ್ಯ ತಂಡ

ಕುಂದಗೋಳ : ಪಟ್ಟಣದ ತಾಲೂಕು ಆಸ್ಪತ್ರೆ ಕಾಂಪೌಂಡ್ ಆವರಣ ಹಾಗೂ ಗಾಳಿ ಮರೆಮ್ಮದೇವಿ ದೇವಸ್ಥಾನದ ಆವರಣದ ಸ್ವಚ್ಛತಾ ಕಾರ್ಯಕ್ಕೆ ಇಲ್ಲೋಂದು ಸಂಸ್ಥೆ ಸ್ವಯಂ ಸೇವಕರು ಅಣಿಯಾಗಿದ್ದಾರೆ. ಹಾಗೇ ಸ್ವಚ್ಛತೆ ಕೂಡಾ ಆರಂಭಿಸಿ ನೈರ್ಮಲ್ಯ ಆರಂಭಿಸಿದ್ದಾರೆ.

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಘದ "ಶೌರ್ಯ" ಸಂಘದ ಸ್ವಯಂ ಸೇವಕರೇ ಇಂತಹ ಕಾರ್ಯಕ್ಕೆ ಅಣಿಯಾದವರು, ಬೆಳಂ ಬೆಳಿಗ್ಗೆಯೇ ಪೂರಕೆ, ಸಲಕೆ ಹಿಡಿದು ಸ್ವಚ್ಛತೆ ಸಿದ್ಧರಾದವರು.

ಹೆಚ್ಚುತ್ತಿರುವ ಅನೈರ್ಮಲ್ಯ ಹಾಗೂ ಅಸ್ವಚ್ಛತೆಗೆ ಈ ಶೌರ್ಯ ಸಂಘದವರು, ಸರ್ವರೂ ಸ್ವಯಂ ಪ್ರೇರಿತರಾಗಿ ಶ್ರಮದಾನ ಮೂಲಕ ಸಾರ್ವಜನಿಕ ಸ್ಥಳಗಳ ಸ್ವಚ್ಛತಾ ಕಾರ್ಯಕ್ಕೆ ಅಣಿಯಾಗಿ ಜನರಿಗೆ ಸಾರ್ವಜನಿಕ ಸ್ಥಳ ಮಲೀನ ಮಾಡದಂತೆ ಹಾಗೂ ತಾವೂ ಸಹ ಸ್ವಚ್ಛತೆಗೆ ಸಹಕರಿಸುವಂತೆ ಕರೆ ನೀಡಿದ್ದಾರೆ. ಒಟ್ಟಾರೆ ಜನ ಇವರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Edited By : Shivu K
Kshetra Samachara

Kshetra Samachara

24/01/2022 12:05 pm

Cinque Terre

20.33 K

Cinque Terre

0

ಸಂಬಂಧಿತ ಸುದ್ದಿ