ಹುಬ್ಬಳ್ಳಿ: ನಗರದಲ್ಲಿ ಸಂಚಾರಿ ನಿಯಮಗಳನ್ನು ಗಾಳಿಗೆ ತೂರಿ ಸಾರ್ವಜನಿಕರಿಗೆ ಕಿರಿಕಿರಿ ಮಾಡಿ ಓಡಾಡುತ್ತಿದ್ದ ಲಕ್ಷ ಲಕ್ಷ ಬೆಲೆಬಾಳುವ ಎರಡು ಐಷಾರಾಮಿ ಬೈಕ್ ಗಳನ್ನು ಸಂಚಾರಿ ಪೊಲೀಸರು ನಗರದಲ್ಲಿ ವಶಕ್ಕೆ ಪಡೆದಿದ್ದಾರೆ.
ಹುಬ್ಬಳ್ಳಿಯ ಗೋಕುಲ್ ರಸ್ತೆಯಲ್ಲಿ ವಿನೋದ್ ಹಾಗೂ ಲಕ್ಷ್ಮಣ ಎಂಬವರು ಲಕ್ಷ ಲಕ್ಷ ಬೆಲೆಬಾಳುವ ಎರಡು ಐಷಾರಾಮಿ ಬೈಕ್ ಗಳ ಸೈಲೆನ್ಸರ್ ತೆಗೆದು ಕರ್ಕಶ ಶಬ್ದವನ್ನು ಮಾಡಿಕೊಂಡು ಅತಿವೇಗವಾಗಿ ಬೈಕ್ ಚಾಲನೆ ಮಾಡುತ್ತಿದ್ದಾರೆ ಎಂಬ ಮಾಹಿತಿಯನ್ನು ಸಾರ್ವಜನಿಕರು ಉತ್ತರ ಸಂಚಾರಿ ಪೊಲೀಸರ ಗಮನಕ್ಕೆ ತಂದಿದ್ದಾರೆ.
ಕೂಡಲೇ ಉತ್ತರ ಸಂಚಾರಿ ಠಾಣೆಯ ಇನ್ಸ್ ಪೆಕ್ಟರ್ ಮರಳುಸಿದ್ದಪ್ಪ ಅವರು ಗೋಕುಲ್ ರಸ್ತೆಯಲ್ಲಿ ಐಷಾರಾಮಿ ಬೈಕ್ ಗಳ ಮೇಲೆ ಮೋಜು ಮಸ್ತಿ ಮಾಡುತ್ತಿದ್ದ ಬೈಕ್ ಸವಾರರನ್ನು ಬೈಕ್ ಸಮೇತ ಹಿಡಿದು ತಂದಿದ್ದು, ಉತ್ತರ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
Kshetra Samachara
06/10/2022 02:13 pm