ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಸರ್ಕಾರದ ಮಲತಾಯಿ ಧೋರಣೆಗೆ ಖಂಡನೆ: ಮತ್ತೆ ಪೌರಕಾರ್ಮಿಕರಿಂದ ಹೋರಾಟದ ಎಚ್ಚರಿಕೆ

ಹುಬ್ಬಳ್ಳಿ: ವಾಣಿಜ್ಯ ನಗರಿ ಹುಬ್ಬಳ್ಳಿ ಅಂದವಾಗಿ ಕಾಣಲು ಇವರ ಪಾತ್ರ ಅತಿಮುಖ್ಯ. ನಗರದಲ್ಲಿ ಇವರಿಂದಲೇ ಸ್ವಚ್ಚತೆ ಉಳಿಯುತ್ತಿರೋದು. ಎಷ್ಟೇ ಕೊಳಚೆ ಇದ್ರೂ ಇವ್ರು ಸ್ವಚ್ಛಗೊಳಿಸುತ್ತಾರೆ. ಕೊರೋನಾ ಸಮಯದಲ್ಲೂ ಭಯ ಪಡದೆ ಗಲ್ಲಿ ಗಲ್ಲಿಯನ್ನೂ ಸ್ವಚ್ಛ ಮಾಡಿ ಜನರ ಆರೋಗ್ಯ ಕಾಪಾಡಿದ್ದಾರೆ. ಆದರೆ ಸರ್ಕಾರ ಮಾತ್ರ ಇವರಿಗೆ ಅನ್ಯಾಯ ಮಾಡುತ್ತಿರೋದು ಸರೀನಾ? ಅಷ್ಟಕ್ಕೂ ಅವರೆಲ್ಲಾ ಯಾರು? ಅವ್ರಿಗಾಗ್ತಿರುವ ಅನ್ಯಾಯವಾದ್ರೂ ಏನು ಅಂತೀರಾ? ಹಾಗಾದ್ರೆ ಈ ಸ್ಟೋರಿ ನೋಡಿ..

ಹೀಗೆ ಒಂದು ಕಡೆ ಗಟಾರದಲ್ಲಿ ಇಳಿದು ಮ್ಯಾನ್ ಹೋಲ್ ಸ್ವಚ್ಚತೆ ಮಾಡುತ್ತಿರುವ ದೃಶ್ಯ.. ಇನ್ನೊಂದಡೆ ನಮ್ಮನ್ನು ಖಾಯಂಗೊಳಿಸಿ ಎಂದು ಮನವಿ ಮಾಡುತ್ತಿರುವ ದೃಶ್ಯಗಳು. ಅಂದಹಾಗೇ ಇವರೆಲ್ಲ ಮಹಾನಗರವನ್ನು ಸ್ವಚ್ಛ ಮಾಡುವ ಪೌರ ಕಾರ್ಮಿಕರು. ಸರ್ಕಾರ ಮಲತಾಯಿ ಧೋರಣೆ ಮಾಡುತ್ತಿದೆ ಎಂದು ಇವರೆಲ್ಲಾ ಸರ್ಕಾರದ ವಿರುದ್ಧ ಗರಂ ಆಗಿದ್ದಾರೆ. ರಾಜ್ಯದ ಎಲ್ಲ ನಗರ, ಸ್ಥಳೀಯ ಸಂಸ್ಥೆಗಳಲ್ಲಿ ಸ್ವಚ್ಛತಾ ಕಾರ್ಯನಿರ್ವಹಿಸುತ್ತಿರುವ ಪೌರಕಾರ್ಮಿಕರು, ಒಳಚರಂಡಿ ಸ್ವಚ್ಛತಾ ಕಾರ್ಮಿಕರು, ಲೋಡರ್ಸ್, ಕ್ಲೀನರ್ಸ್, ಸಹಾಯಕರು, ಕಸದ ವಾಹನ ಚಾಲಕರನ್ನು ಸಚಿವ ಸಂಪುಟದ ತೀರ್ಮಾನದಂತೆ ಎಲ್ಲರನ್ನೂ ಏಕಕಾಲಕ್ಕೆ ಖಾಯಂಗೊಳಿಸಬೇಕೆಂದು ಒತ್ತಾಯಿಸಿದ್ರೂ, ಸರ್ಕಾರ ಮಾತ್ರ ಕ್ಯಾರೆ ಎನ್ನುತ್ತಿಲ್ಲವಂತೆ. ಹಾಗಾಗಿ ಮೇ.19 ರಂದು ರಾಜ್ಯಾದ್ಯಂತ ಎಲ್ಲ ಪೌರಕಾರ್ಮಿಕರು ಪ್ರತಿಭಟನೆ ಮಾಡುತ್ತಿದ್ದೇವೆಂದು ಎಚ್ಚರಿಕೆ ನೀಡಿದ್ದಾರೆ.

ರಾಜ್ಯದ ನಗರ ಸ್ಥಳೀಯ ಸಂಸ್ಥೆಗಳಾದ ಮಹಾನಗರ ಪಾಲಿಕೆ, ನಗರಸಭೆ, ಪುರಸಭೆ, ಪಟ್ಟಣ ಪಂಚಾಯತಿಗಳಲ್ಲಿ ಸ್ವಚ್ಚತಾ ಕಾರ್ಯನಿರ್ವಹಿಸುತ್ತಿರುವ ಕಾರ್ಮಿಕರು ನಮ್ಮ ಬದುಕು ಬೀದಿಪಾಲಾಗಿದೆ ಎಂದು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.

ಒಟ್ಟಿನಲ್ಲಿ ತಮ್ಮ ಪ್ರಾಣವನ್ನು ಲೆಕ್ಕಿಸದೇ ಎಲ್ಲರ ಆರೋಗ್ಯ ಕಾಪಾಡುವ ಪೌರ ಕಾರ್ಮಿಕರನ್ನು ಸರ್ಕಾರ ಖಾಯಂಗೊಳಿಸಿ ಅವರ ಬದುಕಿಗೂ ಆಶ್ರಯ ನೀಡಲಿ ಅನ್ನೋದೇ ನಮ್ಮ ಆಶಯ...

Edited By : Somashekar
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

17/05/2022 06:07 pm

Cinque Terre

225.62 K

Cinque Terre

5

ಸಂಬಂಧಿತ ಸುದ್ದಿ