ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಅಳ್ನಾವರ: ರಕ್ಕಸ ಮಳೆಗೆ ಇಪ್ಪತ್ತು ಎಮ್ಮೆಗಳು ಬಲಿ - ಬದುಕು ಬೀದಿ ಪಾಲು

ಅಳ್ನಾವರ: ನಿನ್ನೆ ಸುರಿದ ಭಾರಿ ಮಳೆಗೆ ಸುಮಾರು ಇಪ್ಪತ್ತು ಎಮ್ಮೆಗಳು ನೀರಲ್ಲಿ ಕೊಚ್ಚಿಕೊಂಡು ಹೋಗಿರುವ ಘಟನೆ ಅಳ್ನಾವರ ತಾಲೂಕಿನ ಶಿವನಗರ ಗ್ರಾಮದಲ್ಲಿ ನಡೆದಿದೆ.

ಶಿವನಗರ ಗ್ರಾಮದ ಗೌಳಿಗರು ದನಗಳನ್ನ ಮೇಯಿಸಲು ಪ್ರತಿದಿನದಂತೆ ಕಾಡಿಗೆ ತೆರಳಿದ್ದರು.ಸಂಜೆ ಏಕಾಏಕಿ ಸುರಿದ ರಕ್ಕಸ ಮಳೆಗೆ ಹಳ್ಳ ಕೊಳ್ಳಗಳು ತುಂಬಿ ಪ್ರವಾಹದ ಭೀತಿ ಎದುರಾಗಿದೆ. ನೋಡ ನೋಡುತ್ತಿದ್ದಂತೆ ಹಳ್ಳದ ನೀರು ಸಾವಿನ ಕೂಪವಾಗಿ, ಗೌಳಿಗರ ಸುಮಾರು ಇಪ್ಪತ್ತು ಎಮ್ಮೆಗಳು ತೇಲಿಕೊಂಡು ಹೋಗಿ ಪ್ರಾಣ ಕಳೆದುಕೊಂಡಿವೆ.

ಸಿದ್ದು ಎಮಕರ ಎಂಬುವವರ ಮೂರು ಎಮ್ಮೆಗಳು, ಜಾನು ಶಿಂದೆ, ಬಮ್ಮು ಯಮಕರ ಎಂಬುವವರ ತಲಾ ಎರಡು ಎಮ್ಮೆಗಳ ಮೃತ ದೇಹ ಪತ್ತೆಯಾಗಿವೆ. ಉಳಿದ ಮೃತ ಎಮ್ಮೆಗಳಿಗಾಗಿ ಶೋಧಕಾರ್ಯ ನಡೆದಿದೆ.

ದನಗಳಿಂದಲೇ ಬದುಕು ಕಟ್ಟಿಕೊಂಡು, ಮೂರು ಹೊತ್ತಿನ ತುತ್ತು ಅನ್ನಕ್ಕಾಗಿ ಅವುಗಳನ್ನೇ ನಂಬಿಕೊಂಡ ಶಿವನಗರ ಗ್ರಾಮದ ಗೌಳಿಗರ ಬದುಕೀಗ ಅಕ್ಷರಶಃ ನಲುಗಿ ಹೋಗಿದೆ. ಬೆಲೆ ಬಾಳುವ ಎಮ್ಮೆಗಳನ್ನ ಕಳೆದುಕೊಂಡವರ ಗೋಳು ಹೇಳತೀರದಾಗಿದೆ.

ಮಹಾಂತೇಶ ಪಠಾಣಿ, ಪಬ್ಲಿಕ್ ನೆಕ್ಸ್ಟ್ ಅಳ್ನಾವರ

Edited By : Somashekar
Kshetra Samachara

Kshetra Samachara

22/10/2024 12:37 pm

Cinque Terre

13.26 K

Cinque Terre

1

ಸಂಬಂಧಿತ ಸುದ್ದಿ