ವರದಿ: ಈರಣ್ಣ ವಾಲಿಕಾರ
ಹುಬ್ಬಳ್ಳಿ- ಸೇವಾ ಕೇಂದ್ರದಲ್ಲಿ ಸರ್ಕಾರಕ್ಕೆ ಸಂಬಂಧಿಸಿದ ಹಲವಾರು ಇಲಾಖೆಯ ಆನಲೈನ್ ಅರ್ಜಿ ಸಲ್ಲಿಸಿ ಸೇವೆಯನ್ನು ಪಡೆದುಕೊಳ್ಳುತ್ತಿದ್ದರು. ಆದರೆ ಈಗ ಸುಮಾರು ದಿನಗಳಿಂದ ಈ ಸೇವೇ ಸ್ಥಗಿತಗೊಂಡಿದ್ದು ಜನರಲ್ಲಿ ಮತ್ತು ಆನಲೈನ್ ಸೆಂಟರ್ ನಂಬಿಕೊಂಡವರಲ್ಲಿ ಆತಂಕ ಮೂಡಿಸಿದೆ.
ಹೌದು, ಸೇವಾ ಕೇಂದ್ರದ ಸೇವೆ ಈಗ ಸಂಪೂರ್ಣ ಬಂದ್ ಆಗಿದೆ. ಇದರಿಂದಲೇ ಜನಸಾಮಾನ್ಯರು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ವಿವಿಧ ಇಲಾಖೆಗಳಾದ ಆಧಾರ್, ಇನ್ಸೂರೆನ್ಸ್, ಬ್ಯಾಂಕಿಂಗ್, ಪ್ಯಾನ್ ಕಾರ್ಡ್, ಆರೋಗ್ಯ ಕಾರ್ಡ್, ಹೀಗೆ ಹಲವಾರು ಸೇವೆಗಳನ್ನು ಜನರು ಸರ್ಕಾರಿ ಕಚೇರಿಗಳಿಗೆ ತೆರಳದೆ ಈ ಆನಲೈನ್ ಕೇಂದ್ರಗಳ ಮೂಲಕ ಹಲವಾರು ಯೋಜನೆಗಳ ಸೌಲಭ್ಯ ಕೋರಿ ಆನಲೈನ್ ಅರ್ಜಿಗಳನ್ನು ಸಲ್ಲಿಸಬಹುದಿತ್ತು. ಆದರೆ ಈ ಸೇವೆ ಈಗ ಕೇಂದ್ರ ಸರ್ಕಾರದ ಸಿಎಸ್ ಕೆ (ಸೆಂಟ್ರಲ್ ಸೇವಾ ಕೇಂದ್ರ) ವ್ಯಾಲೆಟಗೆ ಲಿಂಕ್ ಆಗಿದ್ದು ಇಲ್ಲಿಯ ವರೆಗೂ ಈ ತಾಂತ್ರಿಕ ಸಮಸ್ಯೆ ಬಗೆ ಹರಯದೇ ಜನರು ಮತ್ತು ಆನಲೈನ್ ಸೆಂಟರ್ ನಡುವೆ ವಾಗ್ವಾದ ನಡೆಯುತ್ತಿದೆ....
ಸರ್ಕಾರದ ಯಾವುದೇ ಯೋಜನೆಯ ಆನಲೈನ್ ಅಪ್ಲಿಕೇಶನ್ ಹಾಕಬೇಕಾದರೆ ಸರ್ಕಾರದ ಕಚೇರಿಗೆ ಹೋಗುವುದಕ್ಕೆ ಆಗುವುದಿಲ್ಲಾ. ಆದ್ದರಿಂದ ಆನ್ಲೈನ್ ಕೇಂದ್ರಕ್ಕೆ ಬರುತ್ತಾರೆ. ಅಪ್ಲಿಕೇಶನ್ ಹಾಕುವಾಗ ಎಲ್ಲ ಮಾಹಿತಿಯನ್ನು ತೆಗೆದುಕೊಳ್ಳುತ್ತವೆ ಆದರೆ ಹಣ ಪಾವತಿಸುವಾಗ ಎಲ್ಲ ಸಮಸ್ಯೆ ಆಗುತ್ತಿದೆ. ಇದರಿಂದಾಗಿ ದಿನಂಪ್ರತಿ ಕೆಲಸ ಕಾರ್ಯ ಬಿಟ್ಟು ಇದಕ್ಕೆ ನಿಲ್ಲವಂತಾಗಿದೆ ಎಂದು ಜನಸಾಮಾನ್ಯರ ಗೋಳಾಗಿದೆ....
ಒಟ್ಟಿನಲ್ಲಿ ನಾಗರಿಕ ಸೇವೆಗಳನ್ನು ಒದಗಿಸುವ 69 ಇಲಾಖೆಯ 619 ನಾಗರಿಕ ಸೇವಾ ಕೇಂದ್ರ, ಈಗ ಆರಂಭದಲ್ಲಿದ್ದ ಚಾಕಚಕ್ಯತೆಯ ಸಮಗ್ರ ಸೇವೆ ಈಗ ಕೇಂದ್ರಗಳಲ್ಲಿ ಸಿಗುತ್ತಿಲ್ಲ. ಕೇಂದ್ರ ಸರ್ಕಾರ ಸೇವಾ ಸಿಂಧು ಸೇವೆಗಳನ್ನು ಆದಷ್ಟು ಬೇಗ ಇನ್ನಾದರು ಪ್ರಾರಂಭಿಸಬೇಕು ಎಂದು ಜನಸಾಮಾನ್ಯರ ಒತ್ತಾಯವಾಗಿದೆ.....!
Kshetra Samachara
29/09/2020 08:34 pm