ಹುಬ್ಬಳ್ಳಿ- ಸತತವಾಗಿ ಸುರಿದ ಮಳೆಯಿಂದಾಗಿ ರಸ್ತೆಗಳಲೆಲ್ಲವೂ ಕೆಸರು ಮಯವಾಗಿರುವದಕ್ಕೆ ತಾಲೂಕಿನ ಕುಸುಗಲ್ ಗ್ರಾಮದ ನಿವಾಸಿಗಳು ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಗ್ರಾಮದ ವಾರ್ಡ್ ನಂಬರ್ 6 ರ ಕಿಲ್ಲೆಯಲ್ಲಿ, ಸುಮಾರು ವರ್ಷಗಳಿಂದ ರಸ್ತೆ ಸಮಸ್ಯೆಗಳಿಂದ ಬಳಲುತ್ತಿದ್ದರೂ ಕೂಡಾ, ಪಂಚಾಯತಿ ಅಧಿಕಾರಿಗಳು ಸುಗಮ, ರಸ್ತೆ ಮಾಡಲು ಹಿಂದೇಟು ಹಾಕುತ್ತಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ಅಷ್ಟೇ ಅಲ್ಲದೆ ಇಲ್ಲಿ ನಡೆದುಕೊಂಡು ಹೊಗುವುದೇ ದೊಡ್ಡ ಸಾಹಹವಾಗಿದೆ. ರೈತರು, ಕೂಲಿ ಕಾರ್ಮಿಕರು ಈ ರಸ್ತೆಯಿಂದಲೇ ಓಡಾಡುತ್ತಿದ್ದು, ಎಲ್ಲಿ ಕಾಲು ಜಾರಿ ಬಿಳ್ಳುತ್ತೆವೋ ಎಂಬ ಭಯದಿಂದ ಜೀವನ ನಡೆಸುತ್ತಿದ್ದಾರೆ. ಬೇಸಿಗೆ ಸಂದರ್ಭದಲ್ಲಿ ಸುಗಮ ರಸ್ತೆ ಮಾಡಿ ಎಂದು ಮನವಿ ಮಾಡಿದರು ಸಹ, ಯಾವುದೇ ಪ್ರಯೋಜನವಾಗಿಲ್ಲ ಎಂದು ಅಧಿಕಾರಿಗಳ ವಿರುದ್ಧ ಕಿಡಿ ಕಾರಿದ್ದಾರೆ, ಆದಷ್ಟು ಬೇಗ ರಸ್ತೆ ನಿರ್ಮಾಣ ಮಾಡದೇ ಇದ್ದರೇ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ...
Kshetra Samachara
22/09/2020 04:35 pm