ಕುಂದಗೋಳ : ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಕುಂದಗೋಳ ತಾಲೂಕು ಆಸ್ಪತ್ರೆ ಸಹಯೋಗದಲ್ಲಿ ತಾಲೂಕು ಮಟ್ಟದ ವಿಶ್ವ ಮಲೇರಿಯಾ ದಿನಾಚರಣೆ ಜಾಥಾ ಕುಂದಗೋಳ ಪಟ್ಟಣದಲ್ಲಿ ಯಶಸ್ವಿಯಾಗಿ ಜರುಗಿ ಜನರಲ್ಲಿ ಜಾಗೃತಿ ಮೂಡಿಸಿತು.
ತಾಲೂಕು ಆಸ್ಪತ್ರೆ ವೈದ್ಯಾಧಿಕಾರಿಗಳು ಹಸಿರು ನಿಶಾನೆ ತೋರುವ ಮೂಲಕ ವಿಶ್ವ ಮಲೇರಿಯಾ ದಿನಾಚರಣೆ ಜಾಥಾಗೆ ಚಾಲನೆ ನೀಡಿದರು. ಬಳಿಕ ಮಲೇರಿಯಾ ದಿನಾಚರಣೆ ಜಾಥಾ ಕುಂದಗೋಳ ಪಟ್ಟಣದ ಮೂರಂಗಡಿ ಕ್ರಾಸ್ ಸೇರಿದಂತೆ ಮಾರ್ಕೆಟ್ ರಸ್ತೆ ಹಾಗೂ ಕುಂದಗೋಳದ ಸಾರ್ವಜನಿಕರ ಸ್ಥಳಗಳಲ್ಲಿ ಸಂಚರಿಸಿ ಮಲೇರಿಯಾ ರೋಗದ ರಕ್ಷಣೆ ನವೀನ ವಿಧಾನಗಳನ್ನು ಬಳಸುವ ಬಗೆಗೆ ಜನರಿಗೆ ತಿಳಿಸುತ್ತಾ ತಹಶೀಲ್ದಾರ ಕಚೇರಿ ತಲುಪಿತು.
ಆಶಾ ಕಾರ್ಯಕರ್ತೆಯರು, ತಾಲೂಕು ಆಸ್ಪತ್ರೆ ವೈದ್ಯಾಧಿಕಾರಿ ಸಿಬ್ಬಂದಿಗಳು, ವಿಶ್ವ ಮಲೇರಿಯಾ ದಿನಾಚರಣೆ ಜಾಗೃತಿ ಜಾಥಾದಲ್ಲಿ ಪಾಲ್ಗೊಂಡಿದ್ದರು.
Kshetra Samachara
25/04/2022 05:13 pm