ಹುಬ್ಬಳ್ಳಿ: ಅದು ರಾಜ್ಯದ ಎರಡನೇ ಅತಿದೊಡ್ಡ ಮಹಾನಗರ ಪಾಲಿಕೆ. ಕೋರೊನಾ ವೈರಸ್ ವಿರುದ್ಧ ಶತಾಯು ಗತಾಯು ಹೋರಾಟ ಏನೋ ನಡೆಸಿದೆ.ಆದರೆ ಈ ಪಾಲಿಕೆಯ ಆಸ್ಪತ್ರೆಯ ಸಿಬ್ಬಂದಿಗಳ ಆರೋಗ್ಯದ ಬಗ್ಗೆ ಪಾಲಿಕೆ ಮಾತ್ರ ಕಿಂಚಿತ್ತೂ ಕಾಳಜಿ ವಹಿಸುತ್ತಿಲ್ಲ.ಅಷ್ಟಕ್ಕೂ ಅಲ್ಲಿ ಆಗಿದ್ದಾದರೂ ಏನು ಅಂತೀರಾ..
ಪ್ರೀಯ ವೀಕ್ಷಕರೇ ಇಲ್ಲಿರುವ ಅವ್ಯವಸ್ಥೆಯನ್ನೊಮ್ಮೆ ಕಣ್ಣು ತುಂಬ ನೋಡಿಬಿಡಿ.ಇದು ಹು-ಧಾ ಮಹಾನಗರ ಪಾಲಿಕೆ ಚಿಟಗುಪ್ಪಿ ಆಸ್ಪತ್ರೆಯ ವೈದ್ಯಕೀಯ ಸಿಬ್ಬಂದಿಗಳ ವಸತಿ ಗೃಹಗಳ ಪರಿಸ್ಥಿತಿ. ದಿನವು ಡ್ರೈನೇಜ್ ವಾಟರ್ ಹರಿದು ಬಂದು ಎಲ್ಲೆಂದರಲ್ಲಿ ನಿಂತುಕೊಂಡು ಪರಿಸರ ಮಾಲಿನ್ಯ ತಾಂಡವವಾಡುತ್ತಿದೆ.ಹೌದು..ಸಾರ್ವಜನಿಕರ ಆರೋಗ್ಯಕ್ಕಾಗಿ ಹೋರಾಟ ನಡೆಸುವ ಹು-ಧಾ ಮಹಾನಗರ ಪಾಲಿಕೆಯ ಚಿಟಗುಪ್ಪಿ ಆಸ್ಪತ್ರೆಯ ವೈದ್ಯಕೀಯ ಸಿಬ್ಬಂದಿಗಳ ಆರೋಗ್ಯಕ್ಕೆ ಮಾತ್ರ ಯಾವುದೇ ಬೆಲೆಯೇ ಇಲ್ಲವಾಗಿದೆ.ಅವಳಿನಗರದ ಜನರಿಗೆ ಮೂಲಭೂತ ಸೌಕರ್ಯ ಕಲ್ಪಿಸುವ ಪಾಲಿಕೆ ತಮ್ಮ ವೈದ್ಯಕೀಯ ಸಿಬ್ಬಂದಿಗಳ ಆರೋಗ್ಯದ ಬಗ್ಗೆ ಮಾತ್ರ ತಲೆ ಕಡೆಸಿಕೊಂಡಿಲ್ಲ.
ಡ್ರೈನೇಜ್ ಹರಿದು ಬಂದು ಕೊಳಚೆ ನೀರು ನಿಂತುಕೊಂಡು ದುರ್ವಾಸನೆ ಎದ್ದಿದೆ.ಅಲ್ಲದೇ ಸೊಳ್ಳೆಗಳ ಕಾಟದಿಂದ ಇಲ್ಲಿರುವ ವೈದ್ಯಕೀಯ ಸಿಬ್ಬಂದಿಗಳು ಹಾಗೂ ಅವರ ಕುಟುಂಬದ ಸದಸ್ಯರು ಮಾತ್ರ ಸಂಕಷ್ಟದಲ್ಲಿಯೇ ಜೀವನ ನಡೆಸುತ್ತಿದ್ದಾರೆ.ದುರ್ವಾಸನೆಗೆ ಹಾಗೂ ಸೊಳ್ಳೆಗಳ ಕಾಟಕ್ಕೆ ಹೊರಗೆ ಬರಲು ಕೂಡ ಹಿಂದೇಟು ಹಾಕುತ್ತಿದ್ದಾರೆ.ಕೊರೋನಾ ಸೇನಾನಿಗಳು ಎಂದು ಕರೆಸಿಕೊಳ್ಳುವ ವೈದ್ಯಕೀಯ ಸಿಬ್ಬಂದಿಗಳು ತಮ್ಮ ಮನೆಯಲ್ಲಿ ನೆಮ್ಮದಿಯ ನಿಟ್ಟುಸಿರು ಬಿಡಲು ಕೂಡ ಹೋರಾಟ ನಡೆಸಬೇಕಾಗಿದೆ.
ಸುಮಾರು ದಿನಗಳಿಂದ ಇಂತಹ ಅವ್ಯವಸ್ಥೆ ತಲೆದೂರಿದ್ದರೂ ಕೂಡ ಪಾಲಿಕೆ ಯಾವುದೇ ಅಧಿಕಾರಿಗಳಾಗಲಿ,ಸಿಬ್ಬಂದಿಗಳಾಗಳಲಿ ತಲೆ ಕಡೆಸಿಕೊಂಡಿಲ್ಲ.ಕೂಡಲೇ ಎಚ್ಚೇತ್ತು ಸೂಕ್ತ ಕ್ರಮ ಜರುಗಿಸದಿದ್ದರೇ ಸಾರ್ವಜನಿಕರಿಗೆ ಚಿಕಿತ್ಸೆ ನೀಡುವ ವೈದ್ಯಕೀಯ ಸಿಬ್ಬಂದಿಗಳೇ ಅನಾರೋಗ್ಯದಿಂದ ಆಸ್ಪತ್ರೆ ಸೇರಬೇಕಾದಿತು ಎಚ್ಚರ...!
Kshetra Samachara
26/02/2021 01:33 pm