ಹುಬ್ಬಳ್ಳಿ: ಕೊರೋನಾ ವೈರಸ್ ವಿರುದ್ಧ ಹೋರಾಟ ನಡೆಸುತ್ತಿರುವ ಕೊರೋನಾ ವಾರಿಯರ್ಸ್‌ಗೆ ಒಂದಿಲ್ಲೊಂದು ರೀತಿಯಲ್ಲಿ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ.ವೈರಸ್ ವಿರುದ್ದ ಶತಾಯು ಗತಾಯು ಹೋರಾಟ ನಡೆಸುತ್ತಿರುವ ಕೋರಾನಾ ಸೇನಾನಿಗಳಿಗೆ ವರ್ಷಕಳೆದರು ನೌಕರರ ಪಿಎಫ್ ಮಾತ್ರ ಜಮೆಯಾಗಿಲ್ಲ...
ಹೌದಾ...ಉತ್ತರ ಕರ್ನಾಟಕದ ಸಂಜೀವಿನಿ ಎಂದೆ ಖ್ಯಾತಿ ಪಡೆದ ಕಿಮ್ಸ್ ಆಸ್ಪತ್ರೆಯಲ್ಲಿ ಗ್ರೂಪ್ ಸಿ ನಲ್ಲಿ ಗುತ್ತಿಗೆ ಆಧಾರದಲ್ಲಿ ಕಾರ್ಯನಿರ್ವಹಿಸುತ್ತಿರುವ 129 ನೌಕರರಿಗೆ ಭವಿಷ್ಯ ನಿಧಿ ಮರೀಚಿಕೆಯಾಗಿದೆ.ಗುತ್ತಿಗೆ ಆಧಾರದ ಮೇಲೆ ಕಾರ್ಯನಿರ್ವಹಿಸುತ್ತಿರು ಸಿ ಗ್ರೂಪ್ ನೌಕರರಾದ ಲ್ಯಾಬ್ ಟೆಕ್ನಿಸಿಯನ್,ನರ್ಸ್ ಸೇರಿದಂತೆ 129 ನೌಕರರಿಗೆ ಪಿಎಫ್ ಸೌಲಭ್ಯ ಮಾತ್ರ ಕೈಗೆಟುಕುತ್ತಿಲ್ಲ.
2015ರಲ್ಲಿಯೇ 64 ದಿನಗಳ ಹೋರಾಟದ ಬಳಿಕ ಭವಿಷ್ಯ ನಿಧಿ ಪಡೆದುಕೊಳ್ಳಬೇಕಾಗಿತ್ತು. ಅಂತಿಮವಾಗಿ ಕಳೆದ ವರ್ಷ ಜು.30ರಂದು ಸುದೀರ್ಘ ವಿಚಾರಣೆ ನಡೆಸಿ ಗುತ್ತಿಗೆ ನೌಕರರ 2001ರಿಂದ 2017ರ ಸೆಪ್ಟೆಂಬರ್ ವರೆಗಿನ ಒಟ್ಟು 2.40ಕೋಟಿ ಮೊತ್ತವನ್ನು 2019ರಲ್ಲಿ ಮಂಜೂರು ಮಾಡಿದೇ ಆದರೇ ವರ್ಷ ಕಳೆದರು ಕೂಡ ಇನ್ನೂ ಕೂಡ ನೌಕರರ ಭವಿಷ್ಯ ನಿಧಿ ಜಮೆಯಾಗಿಲ್ಲ.
ನೌಕರರ ನವೀಕೃತ ಆಧಾರ ಕಾರ್ಡ್ ಪಡೆದು ಯುಎನ್ಎ ಖಾತೆ ರಚನೆಗೆ ಎರಡು ತಿಂಗಳ ಕಾಲಾವಧಿಯನ್ನು 2020 ಜುಲೈ ನಲ್ಲಿ ಪಿಎಫ್ ಆಯುಕ್ತರಲ್ಲಿ ಕಿಮ್ಸ್ ಆಡಳಿತ ಮಂಡಳಿ ಮನವಿ ಸಲ್ಲಿಸಿತ್ತು.ಆದರೇ ಸೆಪ್ಟೆಂಬರ್ ತಿಂಗಳು ಮುಗಿಯುತ್ತಾ ಬಂದರೂ ಕೂಡ ಗುತ್ತಿಗೆ ನೌಕರರಿಗೆ ಮಾತ್ರ ಯಾವುದೇ ಪಿಎಫ್ ಮಾತ್ರ ಜಮೆಯಾಗಿಲ್ಲ.
Kshetra Samachara
19/09/2020 08:20 pm