ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಕೇಂದ್ರ ಸರ್ಕಾರದ ನೂತನ ಜಿಎಸ್‌ಟಿ ನೀತಿ ಜಾರಿ; ಜನರ ಆಕ್ರೋಶ

ಹುಬ್ಬಳ್ಳಿ: ಕೇಂದ್ರ ಸರ್ಕಾರದ ನೂತನ ಜಿಎಸ್‌ಟಿ ನೀತಿ ಜಾರಿ ಹಿನ್ನೆಲೆಯಲ್ಲಿ, ಹೊಸ ಜಿಎಸ್‌ಟಿ ನೀತಿಗೆ ಹುಬ್ಬಳ್ಳಿಯ ಜನತೆ ಪಬ್ಲಿಕ್ ನೆಕ್ಸ್ಟ್ ಮೂಲಕ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ದಿನ ಬಳಕೆ ವಸ್ತುಗಳ ಬೆಲೆ ಏರಿಕೆಯಿಂದಾಗಿ ಜನಸಾಮಾನ್ಯರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ. ಬಡ ಹಾಗೂ ಮಧ್ಯಮ ವರ್ಗದ ಜನರಿಗೆ ಈ ನೀತಿಯಿಂದಾಗಿ ಸಾಕಷ್ಟು ಹೊಡೆತ ಬೀಳುತ್ತಿದೆ. ಸರ್ಕಾರ ಪದೇ ಪದೇ ಈ ರೀತಿ ಬೆಲೆ ಏರಿಕೆ ನೀತಿ ಜಾರಿಗೊಳಿಸುವುದು ಅಸಮಂಜಸ. ದಿನಬಳಕೆ ವಸ್ತುಗಳ ಮೇಲೆ ಹೀಗೆ ಜಿಎಸ್‌ಟಿ ಅನ್ವಯ ಮಾಡಿರುವುದಕ್ಕೆ ಆಕ್ರೋಶ ವ್ಯಕ್ತಪಡಿಸಿದರು.

ದಿನನಿತ್ಯ ಜೀವನ ಮಾಡೋದೇ ಕಷ್ಟಕರವಾಗಿದೆ. ಸರ್ಕಾರ ಈ ನೂತನ ಜಿಎಸ್‌ಟಿ ನೀತಿಯನ್ನ ಕೈಬಿಡಬೇಕು. ಜನಸಾಮಾನ್ಯರಿಗೆ ಉಂಟಾಗಿರುವ ಹೊರೆಯನ್ನ ಕಡಿಮೆ ಮಾಡಬೇಕೆಂದು ಹುಬ್ಬಳ್ಳಿ ಜನರು ಕಂದ್ರ ಸರ್ಕಾರದ ವಿರುದ್ಧ ಗರಂ ಆಗಿದ್ದಾರೆ.

Edited By :
Kshetra Samachara

Kshetra Samachara

18/07/2022 05:19 pm

Cinque Terre

25.4 K

Cinque Terre

6

ಸಂಬಂಧಿತ ಸುದ್ದಿ