ಕುಂದಗೋಳ: ಪಟ್ಟಣದ ಸಾರಿಗೆ ಬಸ್ ನಿಲ್ದಾಣದ ಶೌಚಾಲಯದಲ್ಲಿ ನೀರಿಲ್ಲದೆ ಕೀಲಿ ಹಾಕಿದ ಪರಿಣಾಮ ಪ್ರಯಾಣಿಕರಿಗೆ ಬಸ್ ನಿಲ್ದಾಣದ ಬಯಲೇ ಮೂತ್ರ ವಿಸರ್ಜನೆ ತಾಣವಾಗಿದೆ.
ಹೌದು ! ತಾಲೂಕು ಕೇಂದ್ರಸ್ಥಾನ ಕುಂದಗೋಳ ಸಾರಿಗೆ ಬಸ್ ನಿಲ್ದಾಣದಲ್ಲಿ ನಿತ್ಯ ನೂರೆಂಟು ಬಸ್ ಓಡಾಡುತ್ತವೆ, ಸಾವಿರಾರು ಜನ ಪ್ರಯಾಣ ಮಾಡುತ್ತಾರೆ. ಇದರಲ್ಲಿ ಪ್ರಕೃತಿ ಬಾಧೆ ಉಂಟಾದವರು ವಾಹನ, ಗೋಡೆಗಳ ಮರೆಗೆ, ಕಾಂಪೌಂಡ್ ಪಕ್ಕ ಮೂತ್ರ ವಿಸರ್ಜನೆ ಮಾಡುತ್ತಿದ್ದು ನೋಡುಗರಿಗೆ ಅಭಾಸ ಎನಿಸುತ್ತಿದೆ.
ನಿನ್ನೆ ಸುರಿದ ಭಾರಿ ಮಳೆ ಗಾಳಿಗೆ ವಿದ್ಯುತ್ ಇಲ್ಲದೆ ಶೌಚಾಲಯಕ್ಕೆ ನೀರಿನ ಕೊರತೆ ಎದುರಾಗಿದ್ದು, ಶೌಚಾಲಯ ಸಿಬ್ಬಂದಿ ಪುರುಷ ಹಾಗೂ ವಿಶೇಷವಾಗಿ ಮಹಿಳಾ ಶೌಚಾಲಯಕ್ಕೂ ಬೀಗ ಜಡಿದಿದ್ದಾರೆ. ಇದರಿಂದಾಗಿ ಶಾಲಾ, ಕಾಲೇಜು ವಿದ್ಯಾರ್ಥಿನಿಯರು, ಮಹಿಳೆಯರಿಗೆ ತಾಪತ್ರಯ ಎದುರಾಗಿದ್ರೇ, ಉಳಿದಂತೆ ಪುರುಷರು ಸ್ವತಃ ಸಾರಿಗೆ ನಿಯಂತ್ರಣ ಅಧಿಕಾರಿಗಳೇ ಈ ರೀತಿ ಬಯಲನ್ನೇ ಮೂತ್ರ ವಿಸರ್ಜನೆ ತಾಣ ಮಾಡಿದ್ದಾರೆ.
ಕನಿಷ್ಠ ಒಂದು ಸೇಪ್ಟಿ ನೀರಿನ ಟ್ಯಾಂಕ್ ವ್ಯವಸ್ಥೆ ಇಲ್ಲದ ಸಾರಿಗೆ ಬಸ್ ನಿಲ್ದಾಣದ ಶೌಚಾಲಯ ಅವ್ಯವಸ್ಥೆ ಮಹಿಳೆಯರ ಆಕ್ರೋಶಕ್ಕೆ ಕಾರಣವಾಗಿದೆ. ಮಾನ್ಯ ವಿಭಾಗೀಯ ಸಾರಿಗೆ ಅಧಿಕಾರಿಗಳೇ ದಯವಿಟ್ಟು ಈ ಬಗ್ಗೆ ಗಮನಿಸಿ ಎನ್ನುವುದು ಪಬ್ಲಿಕ್ ಆಗ್ರಹ.
ಶ್ರೀಧರ ಪೂಜಾರ ಪಬ್ಲಿಕ್ ನೆಕ್ಸ್ಟ್
Kshetra Samachara
03/06/2022 06:16 pm