ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಮಳೆಗಾಲದಲ್ಲೂ ನಿರಂತರ ವಿದ್ಯುತ್ ನೀಡಲು ಹೆಸ್ಕಾಂದಿಂದ ಅಭಿಯಾನ

ಹುಬ್ಬಳ್ಳಿ: ಮಳೆಗಾಲ ಪ್ರಾರಂಭ ಆದರೆ ಸಾಕು ಯಾವಾಗ ಅಂದರೆ ಅವಾಗ ಕರೆಂಟ್ ಕೈಕೊಡುವುದು ಸರ್ವೇ ಸಾಮಾನ್ಯ. ಈ ಹಿನ್ನೆಲೆಯಲ್ಲಿ ಹೆಸ್ಕಾಂ ವಿನೂತನ ಅಭಿಯಾನ ಆರಂಭಿಸಿದ್ದು, ಈ ಮೂಲಕ ಮಳೆಗಾಲದಲ್ಲೂ ಸಾರ್ವಜನಿಕರ ಸಮಸ್ಯೆ ನೀಗಿಸಲು ಕಾರ್ಯಾಚರಣೆಗಿಳಿದಿದೆ.

ಹೌದು. ಮಳೆಗಾಲ ಸನಿಹದ ಹಿನ್ನೆಲೆಯಲ್ಲಿ ಟ್ರಾನ್ಸ್ ಫಾರ್ಮರ್ ಸಂಬಂಧಿತ ಅವಘಡ ತಪ್ಪಿಸಲು ಇಂಧನ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರ ನಿರ್ದೇಶನ ಮೇರೆಗೆ ರಾಜ್ಯಾದ್ಯಂತ ಮೇ 5 ರಿಂದ 15 ರ ವರೆಗೆ ಟ್ರಾನ್ಸ್‌ಫಾರ್ಮರ್ ನಿರ್ವಹಣೆ ಅಭಿಯಾನವನ್ನು ಹಮ್ಮಿಕೊಂಡಿದೆ.

ಅದರಂತೆ ಹುಬ್ಬಳ್ಳಿ ವಿದ್ಯುತ್ ಸರಬರಾಜು ಕಂಪನಿ ನಿಯಮಿತದ 7 ಜಿಲ್ಲೆಗಳಾದ ಧಾರವಾಡ , ಗದಗ , ಹಾವೇರಿ , ಉತ್ತರ ಕನ್ನಡ ,ಬೆಳಗಾವಿ , ಬಾಗಲಕೋಟೆ , ವಿಜಯಪುರದಲ್ಲಿ ನಡೆಯಲಿದೆ. ಇಂದು ಹುಬ್ಬಳ್ಳಿ ನಗರ ವಿಭಾಗದಲ್ಲೂ ಎಇಇ ಜಿ.ಕೃಷ್ಣಪ್ಪ ನೇತೃತ್ವದಲ್ಲಿ ಅಭಿಯಾನ ತಬೀಬ್ ಲ್ಯಾಂಡ್ ನಲ್ಲಿ ನಡೆಯಿತು.

Edited By : Nagesh Gaonkar
Kshetra Samachara

Kshetra Samachara

10/05/2022 09:08 am

Cinque Terre

36.62 K

Cinque Terre

4

ಸಂಬಂಧಿತ ಸುದ್ದಿ