ಹುಬ್ಬಳ್ಳಿ : ಹುಬ್ಬಳ್ಳಿ ದಿನೇ ದಿನೇ ಬೆಳೆಯುತ್ತಿರುವ ನಗರಗಳಲ್ಲಿ ಒಂದು. ಇಂತಹ ನಗರದಲ್ಲಿ ಇದೀಗ ಪಾರ್ಕಿಂಗ್ ಸಮಸ್ಯೆ ಹೆಚ್ಚಾಗುತ್ತಿದೆ ಇದರಿಂದ ನಿತ್ಯ ಜನ ಹೈರಾಣಾಗುತ್ತಿದ್ದಾರೆ.
ಹೌದು ಕಳೆದ 5 ವರ್ಷಗಳ ಹಿಂದೆ ಪಾಲಿಕೆ ಮಾಡಿದ್ದ ಸರ್ವೇ ಇದೀಗ ಮೂಲೆ ಗುಂಪಾಗಿದ್ದು, ಜನರಿಗೆ ಪಾರ್ಕಿಂಗ್ ಜಾಗ ಹುಡುಕುವುದೇ ದೊಡ್ಡ ಸವಾಲಾಗಿದೆ.
ಹೀಗೆ ದೊಡ್ಡ ದೊಡ್ಡ ಬಿಲ್ಡಿಂಗ್ ಗಳ ಮುಂದೆ ನಿಂತಿರುವ ವಾಹನಗಳು, ಎಲ್ಲೂ ಜಾಗವೇ ಇಲ್ಲದೆ ಬಿಲ್ಡಿಂಗ್ ಗಳ ಮುಂದೆ, ರಸ್ತೆಯ ಪಕ್ಕದಲ್ಲೇ ನಿಂತಿರುವ ದ್ವಿಚಕ್ರ ವಾಹನಗಳು, ಸಿಕ್ಕ ಸಿಕ್ಕಲ್ಲಿ ವಾಹನಗಳು ನಿಲ್ಲಲಿಕ್ಕೆ ಪ್ರಮುಖ ಕಾರಣವೇ ಬೃಹತ್ ಕಟ್ಟಡಗಳು, ಮತ್ತು ಐಷಾರಾಮಿ ಹೋಟೆಲ್ ಗಳು.
ಹುಬ್ಬಳ್ಳಿಯ ಸುಮಾರು 300ಕ್ಕೂ ಹೆಚ್ಚು ಬೃಹತ್ ಕಟ್ಟಡಗಳಲ್ಲಿ ಪಾರ್ಕಿಂಗ್ ವ್ಯವಸ್ಥೆಯೇ ಇಲ್ಲ. ಹೀಗಾಗಿ ಕಳೆದ 5 ವರ್ಷಗಳ ಹಿಂದೆಯೇ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಪಾರ್ಕಿಂಗ್ ವ್ಯವಸ್ಥೆ ಇಲ್ಲದ ಕಟ್ಟಡಗಳ ಸರ್ವೇ ಮಾಡುವ ಮೂಲಕ ಡೆಮಾಲಿಶ್ ಮಾಡುವ ಎಚ್ಚರಿಕೆಯನ್ನ ನೀಡಿತ್ತು. ಆದರೆ ಅಲ್ಲಿಂದ ಇಲ್ಲಿಯವರೆಗೆ ಈ ಯೋಜನೆ ಕೇವಲ ನೋಟಿಸ್ ಗೆ ಮಾತ್ರ ಸೀಮಿತವಾಗಿದೆ.
ಇನ್ನೂ ಹುಬ್ಬಳ್ಳಿಯಲ್ಲಿ ಹಲವಾರು ವರ್ಷಗಳಿಂದ ವಾಹನ ದಟ್ಟಣೆ ಹೆಚ್ಚಾಗಿದೆ. ಅಲ್ಲದೇ ಪಾರ್ಕಿಂಗ್ ಗೆ ಸ್ಥಳವೇ ಇಲ್ಲದೆ ವಾಹನ ಸವಾರರು ಪಾರ್ಕ್ ಸಮಸ್ಯೆ ಎದುರಿಸುತ್ತಿದ್ದಾರೆ. ಇನ್ನೂ ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ರಸ್ತೆಗಳ ಕಾರ್ಯ ನಡೆಯುತ್ತಿದ್ದು, ವಾಹನ ಓಡಾಟವೇ ನಗರದಲ್ಲಿ ಕಷ್ಟಸಾಧ್ಯವಾಗಿದೆ.
ಕೆಲವು ದೊಡ್ಡ ಕಟ್ಟಡಗಳ ಕೆಳಗೆ ವಾಹನ ನಿಲುಗಡೆಗೆ ವ್ಯವಸ್ಥೆ ಮಾಡಲಾಗಿದ್ದರೂ ಸಹ 300ಕ್ಕೂ ಹೆಚ್ಚು ಕಟ್ಟಡಗಳಲ್ಲಿ ಈ ವ್ಯವಸ್ಥೆ ಇಲ್ಲವಾಗಿದೆ.
ಹಿಂದೆ ಕೊಟ್ಟ ಪಾಲಿಕೆಯ ನೋಟಿಸ್ ಗೂ ಸಹ ಕಿಮ್ಮತ್ತು ಇಲ್ಲದಂತಾಗಿದ್ದು, ಪಾಲಿಕೆ ಸರ್ವೇ ಕಾರ್ಯವೇ ಸಂಪೂರ್ಣ ಕಾಲಹರಣ ಎನ್ನುವಂತಾಗಿದೆ.
ಒಟ್ಟಾರೆಯಲ್ಲಿ ಕೇವಲ ಬೀದಿ ಬದಿ ವ್ಯಾಪಾರಸ್ಥರ ಮೇಲೆ ದರ್ಪ ತೋರಿಸುವ ಪಾಲಿಕೆ ಅಧಿಕಾರಿಗಳು ಇನ್ನಾದ್ರೂ ದೊಡ್ಡ ದೊಡ್ಡ ಕಟ್ಟಡಗಳ ಮಾಲೀಕರ ಮೇಲೆ ಕಠಿಣ ಕ್ರಮಕ್ಕೆ ಮುಂದಾಗುವ ಮೂಲಕ ಸೂಕ್ತ ಕ್ರಮ ಕೈಗೊಳ್ಳುವರಾ ಕಾದು ನೋಡಬೇಕಿದೆ.
Kshetra Samachara
09/05/2022 11:06 pm