ಹುಬ್ಬಳ್ಳಿ: ರಾಜ್ಯದ ಎರಡನೇ ಅತಿದೊಡ್ಡ ಮಹಾನಗರ ಹುಬ್ಬಳ್ಳಿ-ಧಾರವಾಡದಲ್ಲಿ ಬರೋಬ್ಬರಿ 2,86,000 ಆಸ್ತಿ ನೋಂದಣಿ ಬಾಕಿ ಇದೆ. ಅಲ್ಲದೇ ಕೇವಲ 4,000 ಆಸ್ತಿ ನೋಂದಣಿಯಾಗಿದೆ. ಇದರಿಂದ ಪಾಲಿಕೆ ಬೊಕ್ಕಸಕ್ಕೆ ಬರಬೇಕಿದ್ದ ಆದಾಯ ನಿಂತು ಹೋಗಿತ್ತು. ಆದರೆ ಈಗ ಜಿಲ್ಲಾಡಳಿತ ಹಾಗೂ ಮಹಾನಗರ ಪಾಲಿಕೆ ಆರು ತಿಂಗಳಲ್ಲಿ ನೋಂದಣಿ ಮಾಡುವ ಗುರಿ ಹೊಂದಿದ್ದು, ಆದಾಯ ಹೆಚ್ಚಳಕ್ಕೆ ಅಡಿಪಾಯ ಹಾಕಿಕೊಂಡಿದೆ..
ಇನ್ನು ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ, ಹುಬ್ಬಳ್ಳಿ ಧಾರವಾಡ ನಗರಾಭಿವೃದ್ಧಿ ಪ್ರಾಧಿಕಾರದ ಸಹಯೋಗದೊಂದಿಗೆ ಸಭೆ ನಡೆಸಿ ವಿನೂತನ ನಿರ್ಧಾರಕ್ಕೆ ಚಾಲನೆ ನೀಡಲಾಗಿದೆ. ಇದುವರೆಗೂ ಕೇವಲ 4,000 ಆಸ್ತಿ ನೋಂದಣಿಯಾಗಿದೆ. ಅಲ್ಲದೇ ಬಹುತೇಕ ಸಮಸ್ಯೆಗಳು ಕೇಳಿ ಬಂದ ಬೆನ್ನಲ್ಲೇ ಈಗ ಜಿಲ್ಲಾಡಳಿತ ವಿನೂತನ ನಿರ್ಧಾರಕ್ಕೆ ಮುಂದಾಗಿದೆ. ಹಾಗೂ ಹೊಸ ನೋಂದಣಿ ಪ್ರಕ್ರಿಯೆಗೆ ಜನರ ಬೆಂಬಲ ಬೇಕು ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ್ ಅಭಿಪ್ರಾಯ ವ್ಯಕ್ತಪಡಿಸಿದರು.
ಈಗಾಗಲೇ ಕೃಷಿಯೇತರ ಆಸ್ತಿ ನೋಂದಣಿಯಲ್ಲಿ ಸರ್ವೇ ನಂಬರ್ ಬದಲಿಗೆ ಪಿಐಡಿ ಜಾರಿ ಮಾಡಲಾಗಿದೆ. ಇದರ ಬಗ್ಗೆ ಜನರು ಯಾವುದೇ ಗೊಂದಲಕ್ಕೆ ಒಳಗಾಗದೇ ಸಹಕಾರ ನೀಡಬೇಕು ಎಂದು ಜಿಲ್ಲಾಡಳಿತ ಹಾಗೂ ಮಹಾನಗರ ಪಾಲಿಕೆ ಮನವಿ ಮಾಡಿದೆ.
Kshetra Samachara
24/02/2022 07:57 pm