ಕುಂದಗೋಳ: ಕೇಳಿ ಕೇಳಿ ಸಾರ್ವಜನಿಕರೇ, ವಾಹನ ಸವಾರರೇ, ಸಾರಿಗೆ ಬಸ್ ಸಂಚಾರಿಗಳೆ ನಿಮಗೆ ಫೆ.25 ನಾಳೆಯಿಂದ ಮಾ.16 ರ ವರೆಗೆ ಹುಬ್ಬಳ್ಳಿ ಲಕ್ಷ್ಮೇಶ್ವರ ರಾಜ್ಯ ಹೆದ್ದಾರಿಯ ಶಿರೂರು ಬ್ರಿಡ್ಜ್ ಸಂಚಾರ ಸಂಪೂರ್ಣ ಕ್ಲೋಸ್ ಆಗುತ್ತೆ ನೋಡ್ರಿ.
ಅರೆ.! ಇದೇನ್ರಿ ಮತ್ತ್ ಯಾಕ್ ರಸ್ತೆ, ಬ್ರಿಡ್ಜ್ ಸಂಚಾರ ಕ್ಲೋಸ್ ಅಂತೀರಾ? ಇಷ್ಟು ದಿನ ನಡೆದಂತಹ ಶಿರೂರು ಬ್ರಿಡ್ಜ್ ಕಾಮಗಾರಿ ಶೇ.90% ಮುಕ್ತಾಯದ ಹಂತ ತಲುಪಿದ ಕಾರಣ ಬಾಕಿ ಉಳಿದಿರುವ ಅಂತಿಮ ಹಂತದ ಕಾಮಗಾರಿ ಕೈಗೊಳ್ಳಲು ಮಾರ್ಚ್ 16ವರೆಗೆ ಶಿರೂರು ಬ್ರಿಡ್ಜ್ ಸಂಚಾರಕ್ಕೆ ನಿರ್ಬಂಧ ಹೇರಲಾಗಿದೆ.
ಮತ್ತ್ ನಾವು ಓಡ್ಯಾಡುದ ಎಲ್ಲೇ ಅಂತಿರೇನು? ವಾಹನ ಸವಾರರು ಸಂಶಿ, ಹಿರೆನರ್ತಿ, ಮಾರ್ಗವಾಗಿ ಕುಂದಗೋಳ ಇಲ್ಲವೇ ಕುಂದಗೋಳ, ಸಂಶಿ, ರೊಟ್ಟಿಗವಾಡ, ಹುಬ್ಬಳ್ಳಿ ಮಾರ್ಗಗಳ ಮೂಲಕ ಸಂಚಾರ ಮಾಡಲು ಲೋಕೋಪಯೋಗಿ ಇಲಾಖೆ ಕಾರ್ಯ ನಿರ್ವಾಹಕ ಅಭಿಯಂತರಾದ ಎಸ್.ಬಿ.ಚೌಡಣ್ಣನವರ ತಿಳಿಸಿದ್ದಾರೆ.
Kshetra Samachara
24/02/2022 07:00 pm