ಹುಬ್ಬಳ್ಳಿ: ಕಳೆದ ವರ್ಷ ಜನವರಿ ತಿಂಗಳಲ್ಲಿ 11 ಜನ ದಾವಣಗೆರೆ ಮೂಲದ ಸ್ನೇಹಿತೆಯರನ್ನು ಬಲಿ ಪಡೆದಿದ್ದ ರಾಷ್ಟ್ರೀಯ ಹೆದ್ದಾರಿ 4 ರ ಹುಬ್ಬಳ್ಳಿ-ಧಾರವಾಡ ಮಧ್ಯೆದ ಸಾವಿನ ಹೆದ್ದಾರಿಗೆ ಕೊನೆಗೂ ಕೇಂದ್ರ ಸರ್ಕಾರ ಟೆಂಡರ್ ಕರೆದಿದೆ.
ಇಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದಿಂದ ಟೆಂಡರ್ ಕರೆದಿರುವ ವಿಷಯವನ್ನು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಪತ್ರಿಕಾ ಪ್ರಕಟಣೆ ಮೂಲಕ ಮಾಹಿತಿ ನೀಡಿದ್ದಾರೆ. ಷಟ್ಪಥ ಎಕ್ಸ್‌ಪ್ರೆಸ್ ಹೈವೆ ಜೊತೆಗೆ ನಾಲ್ಕುಪಥ ಸರ್ವಿಸ್ ರಸ್ತೆ ನಿರ್ಮಾಣಕ್ಕೆ ಟೆಂಡರ್ ಕರೆಯಲಾಗಿದೆ.
ಒಟ್ಟು1,200 ಕೋಟಿ ವೆಚ್ಚದಲ್ಲಿ ರಸ್ತೆ ನಿರ್ಮಾಣ ಮಾಡಲು ಒಪ್ಪಿಗೆ ನೀಡಲಾಗಿದೆ.ಹುಬ್ಬಳ್ಳಿ- ಧಾರವಾಡ ಬಳಿ ಪುಣೆ-ಬೆಂಗಳೂರು ಸಂರ್ಪಕ ಕಲ್ಪಿಸುತ್ತಿದ್ದ ರಾಷ್ಟ್ರೀಯ ಹೆದ್ದಾರಿ 4 ರಲ್ಲಿ ಅವಳಿ ನಗರದ ಮಧ್ಯೆ ಕೇವಲ ದ್ವಿಪಥವಿತ್ತು.ಸಧ್ಯ 31 km ಷಟ್ಪಥ ಮಾಡಲು ನಿರ್ಧಾರ ಮಾಡಲಾಗಿದೆ.
ಇತ್ತೀಚಿಗೆ ಕಿರಿದಾದ ರಸ್ತೆಯಿಂದ ಭೀಕರ ಆ್ಯಕ್ಸಿಡೆಂಟ್ ಗಳಿಗೆ ಕುಖ್ಯಾತಿ ಪಡೆದಿತ್ತು. ಕಳೆದ ವರ್ಷ ಜನವರಿಯಲ್ಲಿ ದಾವಣಗೆರಿ ಮೂಲದ 11 ಜನ ವೈಧ್ಯ ಕುಟುಂಬವನ್ನ ಬಲಿ ಪಡೆದಿತ್ತು. ಆ ದುರಂತಕ್ಕೆ ಪ್ರಧಾನಿಯೂ ಕಂಬನಿ ಮಿಡಿದಿದ್ದರು. ಹೀಗಾಗಿ ಇದು ಸಾವಿನ ಹೆದ್ದಾರಿ ಅಂತಲೇ ಕುಖ್ಯಾತಿ ಪಡೆದಿತ್ತು. ಈಗ ಇದಕ್ಕೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಟೆಂಡರ್ ಕರೆಯುವ ಮೂಲಕ 2 ವರ್ಷದ ಒಳಗೆ ಕಾಮಗಾರಿ ಮುಗಿಸುವಂತೆ ಗಡುವು ನೀಡಿದ್ದು, ಈ ಭಾಗದ ಜನರು ಈಗ ನಿರಾಳಾಗುವಂತೆ ಮಾಡಿದೆ.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
07/01/2022 09:40 pm