ಕುಂದಗೋಳ : ನಮಸ್ಕಾರ ರೀ ಕುಂದಗೋಳ ಮಂದಿ, ನಾವು ನೀವೂ ಹುಬ್ಬಳ್ಳಿ ಲಕ್ಷ್ಮೇಶ್ವರ ರಾಜ್ಯ ಹೆದ್ದಾರಿಯ ಶಿರೂರು ಬ್ರಿಡ್ಜ್ ಬಿದೈತಿ ಶಾಲಾ ಕಾಲೇಜು ಮಕ್ಕಳು ಸೇರಿ ಹಳ್ಳಿಗೆ ಪ್ರಯಾಣ ಮಾಡೋ ಜನರಿಗೆ ಕಷ್ಟ ಆಗೇತಿ ಅಂತ್ಹೇಳಿ ಈ ಲೋಕೋಪಯೋಗಿ ಇಲಾಖೆ ಅಧಿಕಾರಿಗಳನ್ನು ಬೇಗ ಬ್ರಿಡ್ಜ್ ಕೆಲ್ಸಾ ಮುಗಸ್ರೀ ಅಂತ್ ಕೇಳಕತ್ತಾವಿ.
ಆದ್ರ.! ಈ ಲೋಕೋಪಯೋಗಿ ಇಲಾಖೆ ಒಳಗೆ ಕೆಲಸ ಮಾಡಾಕ್ ಮುಖ್ಯವಾದ ಸಿಬ್ಬಂದಿ ಕೊರತೆ ಐತಿ ನೋಡ್ರಿ ಹೌದರೀ, ಇಲ್ನೋಡ್ರಿ ಈ ಕೋಣೆ ಒಳಗಿನ ಖಾಲಿ ಚೇರ್ 2 ಜನ ಸಹಾಯಕ ಇಂಜಿನಿಯರ್ ಹುದ್ದೆ ಖಾಲಿ. ಹ್ಹಾ ಹ್ಹಾ ಮತ್ತ್ ಇಲ್ನೋಡ್ರಿ ಈ ಖಾಲಿ ಚೇರ್ ಇಲ್ಲಿ 2 ಜನಾ ದ್ವೀತಿಯ ದರ್ಜೆ ಲೆಕ್ಕ ಸಹಾಯಕರು ಹುದ್ದೆ ಖಾಲಿ ಐತಿ.
ಈಗಾಗಲೇ ಇಲಾಖೆಯಲ್ಲಿರುವ ಸಹಾಯಕ ಇಂಜಿನಿಯರ್ ನವಲಗುಂದಕ್ಕೆ ವರ್ಗ ಆಗ್ಯಾರ್ ಅವ್ರು ಹೋದ್ರ್ ನಮ್ಗ್ ಯಾರ್ರೀ ? ಅಂತ್ಹೇಳಿ ಈ ಲೋಕೋಪಯೋಗಿ ಮುಖ್ಯ ಇಂಜಿನಿಯರ್ ಅವ್ರಿಗೆ ರಿಲೀವ್ ಮಾಡಿಲ್ಲ.
ಈ ಲೋಕೋಪಯೋಗಿ ಆಫೀಸ್ ಒಳಗೆ ಇಷ್ಟು ಸಿಬ್ಬಂದಿ ಕೊರತೆ ಐತಿ, ಇನ್ಯಾವ್ಯಾಗ ಬ್ರಿಡ್ಜ್ ತಯಾರಿ ಆಗೋದು ? ನಮ್ಮ ಮಕ್ಕಳಿಗೆ ಈ ರೀತಿ ಯಾವ್ದೋ ಯಾವ್ದೋ ಗಾಡಿ ಹತ್ತೋ ಪರಿಸ್ಥಿತಿ ಈ ಪಾಟಿ ರಸ್ತೆ ಕಾಯೋ ಪರಿಸ್ಥಿತಿಗೆ ಮುಕ್ತಿ ಯಾವಾಗ ಸಿಗತೇತಿ ಗೊತ್ತಿಲ್ಲಾ.
ಮಾನ್ಯ ಜಿಲ್ಲಾಧಿಕಾರಿಗಳೇ ಲೋಕೋಪಯೋಗಿ ಇಲಾಖೆ ಸಿಬ್ಬಂದಿ ಭರ್ತಿ ಮಾಡಿ ಬ್ರಿಡ್ಜ್ ಕಾಮಗಾರಿ ಬೇಗ ಮುಗಿಸಿರಿ.
ಶ್ರೀಧರ ಪೂಜಾರ ಪಬ್ಲಿಕ್ ನೆಕ್ಸ್ಟ್
Kshetra Samachara
30/09/2021 04:28 pm