ಹುಬ್ಬಳ್ಳಿ: ಹುಟ್ಟಿದ ಮಕ್ಕಳ ಹೆಸರಿಗೆ ಬರ್ತ್ ಸರ್ಟಿಫಿಕೇಟ್ ಬೇಕೇ ಬೇಕು.. ಸತ್ತವರ ಸಂಬಂಧಿಗಳಿಗೆ ಡೆತ್ ಸರ್ಟಿಫಿಕೇಟ್ ಬೇಕು. ಆದರೆ ಹುಬ್ಬಳ್ಳಿಯಲ್ಲಿ ಮಾತ್ರ ಈ ಎರಡು ಸರ್ಟಿಫಿಕೇಟ್ ಇದೀಗ ಸಿಗ್ತಾ ಇಲ್ಲ ನೋಡಿ.. ಹೌದು...ಇದೂ ಆಶ್ಚರ್ಯವಾದರೂ ಸತ್ಯ.. ಹೀಗಾಗಿ ಜನನ-ಮರಣ ಪ್ರಮಾಣಪತ್ರ ಪಡೆಯಲು ಜನರು ನಿತ್ಯ ಪಾಲಿಕೆಯ ಕಚೇರಿಗೆ ಅಲೆದು ಅಲೆದು ಸುಸ್ತಾಗುತ್ತಿದ್ದಾರೆ.ಅಷ್ಟಕ್ಕೂ ಪ್ರಮಾಣ ಪತ್ರ ಯಾಕೆ ಸಿಗ್ತಿಲ್ಲ ಅನ್ನೋ ಸ್ಟೋರಿ ಇಲ್ಲಿದೆ ನೋಡಿ..
ಮಕ್ಕಳು ಹುಟ್ಟಿದ ನಂತರ ಪೋಷಕರಿಗೆ ಜನನ ಪ್ರಮಾಣ ಪತ್ರ ಬೇಕು.. ಆಧಾರ ಕಾರ್ಡ ಮಾಡಿಸಲು. ಶಾಲಾ ದಾಖಲಾತಿಗೆ ಹೆಸರು ನೊಂದಾಯಿಸಲು ಜನನ ಪ್ರಮಾಣ ಪತ್ರ ಬೇಕೇ ಬೇಕು. ಅದೇ ರೀತಿ ಯಾರಾದರೂ ಮೃತಪಟ್ಟರೇ ಅವರ ಸಂಬಂಧಿಕರಿಗೆ ಮರಣ ಪ್ರಮಾಣ ಪತ್ರ ಬೇಕು. ಆಸ್ತಿ ವಿಂಗಡನೆ. ವಾರಸಾ ಮಾಡಿಸಲು ಮರಣ ಪ್ರಮಾಣ ಪತ್ರ ಕಡ್ಡಾಯ.ಆದರೆ ಯಾರಾದರು ಸತ್ತರೇ ಅವರ ಸಂಬಂಧಿಕರಿಗೆ ಮರಣ ಪ್ರಮಾಣ ಪತ್ರ ಸಹ ಸಿಗ್ತಾ ಇಲ್ಲ. ಹೌದು. ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ ವಲಯ ಕಚೇರಿಗಳಲ್ಲಿ ಇದೀಗ ಜನನ- ಮರಣ ಪ್ರಮಾಣ ಪತ್ರ ನೀಡಲು ಕಾಗದವೇ ಇಲ್ಲವಂತೆ. ಹೀಗಾಗಿ ಜನನ ಮರಣ ಪ್ರಮಾಣ ಪತ್ರ ಪಡೆಯಲು ಜನರು ನಿತ್ಯ ಪಾಲಿಕೆಯ ವಲಯ ಕಚೇರಿಗಳಿಗೆ ಅಲೆದು ಅಲೆದು ಸುಸ್ತಾಗಿ ಹೋಗುತ್ತಿದ್ದಾರೆ.
ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ ಎಲ್ಲ ವಲಯ ಕಚೇರಿಗಳಲ್ಲೂ ಜನನ- ಮರಣ ಪ್ರಮಾಣ ಪತ್ರ ನೀಡಲಾಗುತ್ತೆ. ಆದರೆ ಕಳೆದೊಂದು ತಿಂಗಳಿನಿಂದ ಜನನ-ಮರಣ ಪ್ರಮಾಣ ಪತ್ರ ಒದಗಿಸಲು ಸರ್ಕಾರದಿಂದ ಬರಬೇಕಾದ ಕಾಗದ ಪೊರೈಕೆ ಸ್ಥಗಿತವಾಗಿದೆ, ಹೀಗಾಗಿ ಜನನ- ಮರಣ ಪ್ರಮಾಣ ಪತ್ರ ನೀಡುವ ಪೇಪರ್ ಸಿಗದ ಪರಿಣಾಮ ಸ್ಥಳೀಯರು ಪ್ರಮಾಣ ಪತ್ರ ಪಡೆಯಲು ಪರದಾಡಬೇಕಾಗಿದೆ. ಕಾಗದ ಪೊರೈಕೆ ಸರ್ಕಾರದಿಂದ ಪಾಲಿಕೆಗೆ ಸರಬರಾಜು ಆಗದ ಪರಿಣಾಮ ಸ್ಥಳೀಯರು ಪ್ರಮಾಣಪತ್ರ ಪಡೆಯಲು ಪಾಲಿಕೆ ಕಚೇರಿಗಳಿಗೆ ಅಲೆಯಬೇಕಾದ ಅನಿವಾರ್ಯತೆ ಇದೀಗ ಎದುರಾಗಿದೆ. ಈ ಕುರಿತು ಪಾಲಿಕೆ ಅಧಿಕಾರಿಗಳನ್ನು ಪ್ರಶ್ನೆ ಮಾಡಿದರೆ ಪೇಪರ್ ಸಪ್ಲೈ ಆಗಿಲ್ಲ. ಜನರು ಜನನ-ಮರಣ ಪ್ರಮಾಣಗಳನ್ನು ಹತ್ತು ಹತ್ತು ಕೇಳಿದರೆ ನಾವೂ ಕೇವಲ ಒಂದೊಂದೆ ಪೊರೈಕೆ ಮಾಡ್ತಾ ಇದೇವಿ ಅಂತಾರೆ.
ರಾಜ್ಯದ ಎರಡನೇ ಅತಿ ದೊಡ್ಡ ಮಹಾನಗರ ಪಾಲಿಕೆ ಆಗಿರುವ ಹುಬ್ಬಳ್ಳಿ ಧಾರವಾಡದಲ್ಲೆ ಇದೀಗ ಜನನ -ಮರಣ ಪ್ರಮಾಣಪತ್ರಕ್ಕೆ ಪರದಾಟ ಶುರುವಾಗಿದೆ. ಸ್ಥಳೀಯರು ಪ್ರಮಾಣ ಪತ್ರ ಪಡೆಯಲು ಇನ್ನಿಲ್ಲದಂತೆ ಪರದಾಡುತ್ತಿದ್ದಾರೆ. ಇನಾದ್ರು ಜಿಲ್ಲಾಡಳಿತ ಜನನ ಮರಣ ಪ್ರಮಾಣ ಪತ್ರಕ್ಕೆ ಬೇಕಾದ ಕನಿಷ್ಠ ಪೇಪರ್ ಸಪ್ಲೈ ಆದ್ರು ಸರಿಯಾಗಿ ಮಾಡಬೇಕಾಗಿದೆ. ಇಲ್ಲದಿದ್ದರೇ ಜನರು ಮತ್ತಷ್ಟು ಪರದಾಡಬೇಕಾದ ಪರಿಸ್ಥಿತಿ ಅವಳಿ ನಗರದಲ್ಲಿದೆ. ಇನಾದ್ರು ಆ ನಿಟ್ಟಿನಲ್ಲಿ ಪಾಲಿಕೆಯ ಅಧಿಕಾರಿಗಳು, ಜಿಲ್ಲಾಡಳಿತ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರು ಸೂಕ್ತ ಕ್ರಮ ಕೈಗೊಳ್ಳಲು ಮುಂದಾಗಬೇಕಿದೆ.
Kshetra Samachara
27/02/2021 02:02 pm