ಕುಂದಗೋಳ : ನಮ್ಮ ನಮ್ಮ ಭೂಮಿ, ಹೊಲಗಳನ್ನು ನಮ್ಮ ಪಾಲಿಗೆ ಹಂಚಿಕೊಂಡರಾಯ್ತು ಎಂದು ನೀವು ಕುಂದಗೋಳ ತಹಶೀಲ್ದಾರ ಕಚೇರಿಯ ಭೂ ದಾಖಲೆಗಳ ಕಂದಾಯ ವ್ಯವಸ್ಥೆ ಮತ್ತು ಭೂ ದಾಖಲೆಗಳ ಇಲಾಖೆ ಸಹಾಯಕ ನಿರ್ದೇಶಕ ಕಛೇರಿಗೆ ಹೋದ್ರೆ ಸಕಾಲಕ್ಕೆ ನಿಮ್ಮ ಕೆಲಸ ಆಗೋದಿಲ್ಲಾ ಬಿಡಿ.
ಅಯ್ಯೋ ಇದೇನಪ್ಪಾ ! ನಾವು ರೈತರೆಲ್ಲರೂ ಈ ಸಾರಿ ನಮ್ಮ ಜಮೀನಿನ ದಾಖಲೆ ಸರಿಪಡಿಸಲು ತಯಾರಾಗಿದ್ವಿ ಅಂತೀರಾ,
ಸ್ವಾಮಿ, ನೀವು ಏನು ನಿಮ್ಮ ನಿಮ್ಮ ಜಮೀನಿನ ಹಂಚಿಕೆ ಸರ್ಕಾರಿ ಕೆಲಸಕ್ಕಾಗಿ ಕಛೇರಿಗೆ ಹೋಗ್ತಿರಾ, ಆದ್ರೆ ಅಲ್ಲಿ ಕರ್ತವ್ಯ ನಿರ್ವಹಿಸೋ ಅಧಿಕಾರಿಗಳು ಇರಬೇಕಲ್ವೇ ? ಸಮರ್ಪಕವಾದ ಸರ್ಕಾರಿ ಅಧಿಕಾರಿಗಳು ಇರದ ಕಾರಣ ಕುಂದಗೋಳ ತಾಲೂಕಿನ 57 ಹಳ್ಳಿಗರ ಕೆಲಸಗಳು ದಿನ ಕಳೆಯುತ್ತಿವೆ ಹೊರತು ಸೇವೆ ಒದಗಿಸುತ್ತಿಲ್ಲ.
ಕುಂದಗೋಳ ತಹಶೀಲ್ದಾರ ಕಛೇರಿಯ ಭೂ ಮಾಪನ ಕಂದಾಯ ವ್ಯವಸ್ಥೆ ಮತ್ತು ಭೂ ದಾಖಲೆಗಳ ಇಲಾಖೆ ಭೂ ದಾಖಲೆಗಳ ಸಹಾಯಕ ನಿರ್ದೇಶಕ ಕಚೇರಿಯಲ್ಲಿ ತಾಲೂಕಿನ 57 ಹಳ್ಳಿಗಳಿಗೆ ಸೇವೆ ನೀಡಲು 16 ಜನ ಸರ್ವೇ ಅಧಿಕಾರಿಗಳು ಕಾರ್ಯ ನಿರ್ವಹಿಸಬೇಕು, ಅದರಲ್ಲಿ ಕೇವಲ 10 ಜನ ಅಧಿಕಾರಿಗಳು ಕರ್ತವ್ಯದಲ್ಲಿದ್ದು 6 ಜನ ಅಧಿಕಾರಿಗಳಿಲ್ಲದೆ ಆ ಹುದ್ದೆ ಖಾಲಿ ಇವೆ.
ಈ ಕಾರಣ ನಿತ್ಯ ಕಚೇರಿಗೆ ವಿವಿಧ ಸರ್ಕಾರಿ ಕೆಲಸ ಹೊತ್ತು ಬರೋ ರೈತರು, ಸಾರ್ವಜನಿಕರಿಗೆ ಸಕಾಲಕ್ಕೆ ಸೇವೆ ಸಿಗುತ್ತಿಲ್ಲ. ಈ ಬಗ್ಗೆ ರೈತರು ಏನು ಹೇಳ್ತಾರೆ ಕೇಳಿ.
ಈ ಬಗ್ಗೆ ಇನ್ನಾದರೂ ತಾಲೂಕು ಆಡಳಿತ ಗಮನಿಸಿ ಸೂಕ್ತ ಅಧಿಕಾರಿಗಳನ್ನು ಭರ್ತಿ ಮಾಡುವಂತೆ ಜನರು ಒತ್ತಾಯಿಸಿದ್ದಾರೆ.
Kshetra Samachara
18/01/2021 01:34 pm