ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ನೈಋತ್ಯ ರೈಲ್ವೆ ವಲಯ ಹುಬ್ಬಳ್ಳಿಗೆ ಮತ್ತೊಂದು ಗೌರವದ ಗರಿ: ಐಎಸ್‌ಒ ಮಾನ್ಯತೆ ಪಡೆದ ಎಸ್.ಡಬ್ಲೂ.ಆರ್

ಹುಬ್ಬಳ್ಳಿ: ನೈಋತ್ಯ ರೈಲ್ವೆ ವಲಯ ಒಂದಿಲ್ಲೊಂದು ರೀತಿಯಲ್ಲಿ ಜನಪರ ಕಾಳಜಿ ಹಾಗೂ ಸಾರ್ವಜನಿಕರಿಗೆ ಉತ್ಕೃಷ್ಟ ಮಟ್ಟದ ಸೇವೆಯನ್ನು ನೀಡುವ ಮೂಲಕ ಹೆಸರುವಾಸಿಯಾಗಿದೆ.

ಈ ಎಲ್ಲ ಕಾರ್ಯಕ್ಕೆ ನೈಋತ್ಯ ರೈಲ್ವೆ ವಲಯ ಹುಬ್ಬಳ್ಳಿಗೆ ಮತ್ತೊಂದು ಗೌರವದ ಗರಿ ಬಂದಿರುವುದು ವಿಶೇಷ. ಅಷ್ಟಕ್ಕೂ ಯಾವುದು ಆ ಗೌರವ ಅಂತೀರಾ ಈ ಸ್ಟೋರಿ ನೋಡಿ..

ಲಾಕ್ ಡೌನ್ ಸಂದರ್ಭದಲ್ಲಿ ಶ್ರಮಿಕ ಎಕ್ಸ್ಪ್ರೆಸ್ ಮೂಲಕ ಕಾರ್ಮಿಕರನ್ನು ತವರೂರಿಗೆ ತಲುಪಿಸುವ ಹಾಗೂ ಸರಕು ಸಾಗಣೆ ಮೂಲಕ ದೇಶದ ವಿವಿಧ ಮೂಲೆಗಳಿಗೆ ಆಹಾರ ಹಾಗೂ ಅಗತ್ಯ ವಸ್ತುಗಳನ್ನು ಸರಬರಾಜು ಮಾಡುವ ಮೂಲಕ ಸಂದಿಗ್ಧ ಪರಿಸ್ಥಿತಿಯಲ್ಲಿಯೂ ಕಾರ್ಯದಕ್ಷತೆ ಮೆರೆದ ನೈಋತ್ಯ ರೈಲ್ವೆ ವಲಯಕ್ಕೆ

ವಿಪತ್ತು ನಿರ್ವಹಣೆ ಹಾಗೂ ಉತ್ತಮ ನಿರ್ವಹಣಗೆ ಐಎಸ್ಒ ಮಾನ್ಯತೆ ಲಭಿಸಿದೆ.ನೈಋತ್ಯ ರೈಲ್ವೆ ಆಡಳಿತ ಮಂಡಳಿಯ ಕಾರ್ಯಕ್ಷಮತೆಗೆ ಸಿಕ್ಕಿರುವ ಪ್ರತಿಫಲವೇ ಈ ಮಾನ್ಯತೆಯ ಗರಿ..

ಐಎಸ್‌ಒ 9001:2015 ಮಾನ್ಯತೆಯನ್ನು ಪಡೆದಿರುವುದರಲ್ಲಿ ನೈಋತ್ಯ ರೈಲ್ವೆ ಹುಬ್ಬಳ್ಳಿಯೇ ಮೊದಲ ಸ್ಥಾನದಲ್ಲಿರುವುದು ವಿಶೇಷವಾಗಿದೆ.

ಇನ್ನೂ ರೈಲ್ವೆ ವ್ಯವಸ್ಥಾಪಕ ನಿರ್ದೇಶಕರಾದ ಅಜಯಕುಮಾರ ಸಿಂಗ್ ಹಾಗೂ ಸಹಾಯಕ ವ್ಯವಸ್ಥಾಪಕ ನಿರ್ದೇಶಕರಾದ ಇ.ವಿಜಯಾ ಅವರ ನಿರ್ದೇಶನದಲ್ಲಿ

ನೈಋತ್ಯ ರೈಲ್ವೆ ವಿಭಾಗದ ಉತ್ತಮ ನಿರ್ವಹಣೆ ಹಾಗೂ ತುರ್ತು ಸಂದರ್ಭದಲ್ಲಿ ವಿಪತ್ತು ನಿರ್ವಹಣೆಯಿಂದಾಗಿಯೇ ಈ ಒಂದು ಗೌರವವನ್ನು ತನ್ನ ಮುಡಿಗೇರಿಸಿಕೊಂಡಿದೆ.

Edited By : Manjunath H D
Kshetra Samachara

Kshetra Samachara

31/12/2020 11:50 am

Cinque Terre

53.08 K

Cinque Terre

11

ಸಂಬಂಧಿತ ಸುದ್ದಿ