ಪಬ್ಲಿಕ್ ನೆಕ್ಸ್ಟ್ ವರದಿ: ಈರಣ್ಣ ವಾಲಿಕಾರ
ಹುಬ್ಬಳ್ಳಿ: ಏಪ್ರಿಲ್ 14ರಂದು ಇಡೀ ದೇಶಾದ್ಯಂತ ಅಂಬೇಡ್ಕರ್ ಅವರ ಜಯಂತಿ ಆಚರಣೆ ಮಾಡುತ್ತಿದ್ದರು. ಅದೇ ಏಪ್ರಿಲ್ 13ರಂದು ಹುಬ್ಬಳ್ಳಿಯ ಗದಗ ರಸ್ತೆಯ ಗಾಂಧಿವಾಡದಲ್ಲಿ ರಾತ್ರೋ ರಾತ್ರಿ ಡಾ. ಬಿ.ಆರ್ ಅಂಬೇಡ್ಕರ್ ಅವರ ಮೂರ್ತಿ ಪ್ರತಿಷ್ಠಾಪನೆ ಮಾಡಿದ್ದರು. ಏಪ್ರಿಲ್ 14ರಂದು ಬೆಳಗ್ಗೆ ಕೇಶ್ವಾಪೂರ ಠಾಣೆ ಪೊಲೀಸರು ಮತ್ತು ಆರ್‌ಪಿಎಫ್ ಪೊಲೀಸರು ಅಂಬೇಡ್ಕರ್ ಮೂರ್ತಿಯನ್ನು ತೆರವುಗೋಳಿಸಿದರ. ನಂತರ ಅಲ್ಲಿನ ಜನರು ಠಾಣೆಯ ಮುಂದೆ ಪ್ರತಿಭಟನೆ ಮಾಡಿದ್ದರಿಂದ ಮರಳಿ ಪೊಲೀಸರು ಮೂರ್ತಿ ಪ್ರತಿಷ್ಠಾಪನೆ ಮಾಡಿದ್ದರು. ಸದ್ಯ ಈಗ ರೈಲ್ವೆ ಅಧಿಕಾರಿಗಳು ಟ್ವಿಸ್ಟ್ ನೀಡಿದ್ದಾರೆ.
ಹೌದು. ದಲಿತ ಮುಖಂಡರು ಹಾಗೂ ಅಲ್ಲಿನ ನಿವಾಸಿಗಳು ಸೇರಿಕೊಂಡು ನಿನ್ನೆ ಸೋಮವಾರ ದಿನದಂದು ರೈಲ್ವೆ ಜಿಎಮ್ ಅವರಿಗೆ ಮನವಿ ಸಲ್ಲಿಸಿದ್ದರು. ಆದರೆ ಡಾ.ಬಿ.ಆರ್.ಅಂಬೇಡ್ಕರ್ ಪ್ರತಿಮೆ ತೆರವುಗೊಳಿಸಲು ರೈಲ್ವೆ ಅಧಿಕಾರಿಗಳು ಟ್ರೆಸ್ ಪಾಸ್ ಹೆಸರಿನಲ್ಲಿ ತೆರವುಗೊಳಿಸುವ ಷಡ್ಯಂತ್ರ ಮಾಡುತ್ತಿದ್ದಾರಂತೆ. ಹಾಗೇನಾದರೂ ನಡೆದಲ್ಲಿ ಉಂಟಾಗುವ ಅಶಾಂತಿ ಹಾಗೂ ಕಾನೂನು ಭಂಗಕ್ಕೆ ವಿಭಾಗೀಯ ರೈಲ್ವೆ ಅಧಿಕಾರಿಗಳೇ ಹೊಣೆಗಾರರು ಎಂದು ವಿವಿಧ ದಲಿತ ಸಂಘ-ಸಂಸ್ಥೆಗಳ ಮಹಾಮಂಡಳದವರು ಎಚ್ಚರಿಕೆ ನೀಡುತ್ತಿದ್ದಾರೆ.
ಇನ್ನು ರೈಲ್ವೆ ಅಧಿಕಾರಿಗಳು ಕಾನೂನು ಹೆಸರಿನಲ್ಲಿ ಬಲಪ್ರಯೋಗ ಮಾಡಲು ಮುಂದಾಗುತ್ತಿದ್ದಾರಂತೆ ಈಗಾಗಲೇ ರೈಲ್ವೆ ಜಾಗದಲ್ಲಿ ಹಲವಾರು ಮಹಾನ್ ವ್ಯಕ್ತಿಗಳ ಪ್ರತಿಮೆಗಳಿವೆ. ಅದರಂತೆ ಸಂವಿಧಾನ ಶಿಲ್ಪಿ ಅಂಬೇಡ್ಕರ್ ಮೂರ್ತಿ ಸ್ಥಾಪನೆಗೆ ರೈಲ್ವೆ ಅಧಿಕಾರಿಗಳು ಅನುಮತಿ ನೀಡಬೇಕು. ಅಲ್ಲದೇ ಸ್ಥಳೀಯ ಜನಪ್ರತಿನಿಧಿಗಳು ಅಧಿಕಾರಿಗಳೊಂದಿಗೆ ಸಭೆ ನಡೆಸಿ ಪ್ರಕರಣವನ್ನು ಇತ್ಯರ್ಥ ಮಾಡಬೇಕು. ಅದನ್ನು ಬಿಟ್ಟು ಅಂಬೇಡ್ಕರ್ ಮೂರ್ತಿ ತೆರವು ಕಾರ್ಯಕ್ಕೆ ಮುಂದಾದರೇ ಹುಬ್ಬಳ್ಳಿಯಲ್ಲಿ ಮತ್ತೊಂದು ಅಶಾಂತಿಗೆ ಕಾರಣವಾಗಲಿದಿಯಂತೆ.
ಒಟ್ಟಿನಲ್ಲಿ ಕೋಮು ಗಲಭೆಯಿಂದ ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಹೊತ್ತಿ ಉರಿಯುತ್ತಿದೆ. ಮೂರ್ತಿ ತೆರವುಗೋಳಿಸಿದರೆ ಮುಂದಿನ ದಿನಗಳಲ್ಲಿ ರೈಲ್ವೆ ಇಲಾಖೆ ಎದುರು ಮತ್ತು ಕೇಂದ್ರ ಸಚಿವರ ನಿವಾಸದ ಎದುರು ಬೇಡಿಕೆ ಅನುಷ್ಠಾನದವರೆಗೆ ಅನಿರ್ಧಿಷ್ಟಾವಧಿ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
19/04/2022 05:38 pm