ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಪಡಿತರಕ್ಕಾಗಿ ಹೋರಾಟಕ್ಕಿಳಿದ ಜನರು - ಬೇಕೇ ಬೇಕು ರೇಷನ್ ಬೇಕು..!

ಹುಬ್ಬಳ್ಳಿ: ಸರ್ಕಾರ ಹಸಿವು ಮುಕ್ತ ಸಮಾಜಕ್ಕಾಗಿ ಸಾಕಷ್ಟು ಯೋಜನೆ ಜಾರಿಗೊಳಿಸಿದೆ. ಆದರೆ ಸರಿಯಾದ ಸಮಯಕ್ಕೆ ಪಡಿತರ ಬಾರದೇ ಇರುವುದುನ್ನು ಖಂಡಿಸಿ ಹುಬ್ಬಳ್ಳಿಯ ನವನಗರದ ಸಾರ್ವಜನಿಕರು ನ್ಯಾಯ ಬೆಲೆ ಅಂಗಡಿಯ ಮುಂದೆ ಬೇಕೇ..ಬೇಕು ರೇಷನ್ ಬೇಕು ಎಂದು ಘೋಷಣೆ ಕೂಗಿ ಪ್ರತಿಭಟನೆ ನಡೆಸಿದ್ದಾರೆ.

ಸುಮಾರು ತಿಂಗಳಿನಿಂದ ಪಡಿತರ ವ್ಯವಸ್ಥೆಯಲ್ಲಿ ವಿಳಂಬವಾಗುತ್ತಿದ್ದು, ಈ ನಿಟ್ಟಿನಲ್ಲಿ ಸಾರ್ವಜನಿಕರು ಆಕ್ರೋಶಗೊಂಡು ಪಡಿತರ ಚೀಟಿ ಹಿಡಿದುಕೊಂಡು ಪ್ರತಿಭಟನೆ ನಡೆಸಿದ್ದು, ಸರ್ಕಾರದ ವಿರುದ್ಧ ಹಾಗೂ ಆಹಾರ ಸರಬರಾಜು ಇಲಾಖೆಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಅಲ್ಲದೇ ಕೈಯಲ್ಲಿ ಪಡಿತರ ಚೀಟಿ ಹಾಗೂ ಚೀಲ ಹಿಡಿದುಕೊಂಡು ಘೋಷಣೆ ಕೂಗಿ ಅಸಮಾಧಾನ ವ್ಯಕ್ತಪಡಿಸಿದರು.

ಇನ್ನೂ ಹುಬ್ಬಳ್ಳಿ - ಧಾರವಾಡ ಅವಳಿನಗರದ ಬಹುತೇಕ ಕಡೆಯಲ್ಲಿ ನ್ಯಾಯಬೆಲೆ ಅಂಗಡಿಯ ಮುಂದೆ ಜನರು ಜಮಾವಣೆಗೊಂಡಿದ್ದಾರೆ. ಪಡಿತರಕ್ಕಾಗಿ ಹೋರಾಟ ನಡೆಸುವಂತಾಗಿದ್ದು, ನಿಜಕ್ಕೂ ವಿಪರ್ಯಾಸಕರ ಸಂಗತಿಯಾಗಿದೆ.

Edited By : Suman K
Kshetra Samachara

Kshetra Samachara

22/10/2024 04:54 pm

Cinque Terre

23.53 K

Cinque Terre

7

ಸಂಬಂಧಿತ ಸುದ್ದಿ