ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ : ಸ್ಮಾರ್ಟ್ ಸಿಟಿ ಕಾಮಗಾರಿ ಹಿನ್ನೆಲೆ ಜನತಾ ಬಜಾರ್ ತೆರವು ಕಾರ್ಯಾಚರಣೆ

ಹುಬ್ಬಳ್ಳಿ :ಸ್ಮಾರ್ಟ್ ಸಿಟಿ ಯೋಜನೆಯ ಹಿನ್ನೆಲೆಯಲ್ಲಿಂದು ಹುಬ್ಬಳ್ಳಿಯ ಜನತಾ ಬಜಾರ್ ಮಳಿಗೆಗಳ ತೆರವು ಕಾರ್ಯಾಚರಣೆ ಆರಂಭವಾಗಿದೆ. ಇಲ್ಲಿ ಸ್ಮಾರ್ಟ್ ಸಿಟಿ ಯೋಜನೆಯ 18.36 ಕೋಟಿ ಅನುದಾನದಲ್ಲಿ ನವೀಕರಣಗೊಳಿಸುವ ಸ್ಮಾರ್ಟ್ ಸಿಟಿ ಕಾಮಗಾರಿಗೆ ಹು-ಧಾ ಮಹಾನಗರ ಪಾಲಿಕೆಯಿಂದ ತೆರವು ಕಾರ್ಯಾಚರಣೆ ನಡೆಸಲಾಯಿತು.ಪಾಲಿಕೆ ಕಾರ್ಯಾಚರಣೆಗೆ ವ್ಯಾಪಾರಸ್ತರಿಂದ ವಿರೋಧ ವ್ಯಕ್ತವಾಯಿತು.

ಇನ್ನೂ ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ಜನತಾ ಬಜಾರ್ ನವೀಕರಣ ಹಿನ್ನೆಲೆ ಸ್ಥಳೀಯ ವ್ಯಾಪರಸ್ಥರಿಂದ ವಿರೋಧ ವ್ಯಕ್ತವಾಗಿದ್ದರೂ ಕೂಡ ಕಾರ್ಯಾಚರಣೆ ವಿರೋಧದ ನಡುವೆಯೇ ಮುಂದುವರೆಯಿತು. ಈಗಾಗಲೇ ಹು-ಧಾ ಮಹಾನಗರ ಪಾಲಿಕೆ ಸೂಚನೆ ಕೂಡ ನೀಡಿತ್ತು ಈ ಹಿನ್ನೆಲೆಯಲ್ಲಿ ಇಂದು ಬೆಳ್ಳಂಬೆಳಿಗ್ಗೆ ಕಾರ್ಯಾಚರಣೆ ಮುಂದುವರೆದಿದೆ.

ಹೊಸೂರು ಬಳಿ ವ್ಯಾಪಾರಸ್ಥರಿಗೆ ಸ್ಥಳಾವಕಾಶವನ್ನು ಕಲ್ಪಿಸಲಾಗಿದ್ದು,ಅಲ್ಲಿ ಯಾವುದೇ ಮಳಿಗೆ ಸ್ಥಾಪಿಸಿದೆ ಸ್ಥಳಾಂತರ ಮಾಡುತ್ತಿದ್ದಾರೆಂದು ವ್ಯಾಪಾರಸ್ಥರು ಆರೋಪಿಸಿದರು.ಒಟ್ಟು 170ಕ್ಕೂ ಹೆಚ್ಚು ಮಳಿಗೆಗಳನ್ನು ತೆರವು ಮಾಡುತ್ತಿರುವ ಪಾಲಿಕೆ ಸಿಬ್ಬಂದಿಗಳು ಇನ್ನೂ ಸ್ಥಳದಲ್ಲಿ, ಪಾಲಿಕೆ ಅಧಿಕಾರಿಗಳು ಮತ್ತು ಉಪನಗರ ಪೊಲೀಸರ ಬೀಡು ಬಿಟ್ಟಿದ್ದಾರೆ.

Edited By : Manjunath H D
Kshetra Samachara

Kshetra Samachara

25/11/2020 10:39 am

Cinque Terre

44.59 K

Cinque Terre

9

ಸಂಬಂಧಿತ ಸುದ್ದಿ