ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ: ಪ್ಲಾಟ್ ಫಾರ್ಮ ಶುಲ್ಕ ಕಡಿಮೆ ಮಾಡ್ರಿ

ಧಾರವಾಡ: ರೈಲ್ವೆ ಪ್ಲಾಟ್ ಫಾರ್ಮ ಶುಲ್ಕ ಹೆಚ್ಚಳ ಕೈಬಿಡಬೇಕು ಹಾಗೂ ಹುಬ್ಬಳ್ಳಿ, ಬೆಂಗಳೂರು ನಡುವೆ ಪ್ಯಾಸೆಂಜರ್ ರೈಲುಗಳನ್ನು ಈ ಮೊದಲಿನಂತೆಯೇ ಮುಂದುವರೆಸಬೇಕು ಎಂದು ಆಗ್ರಹಿಸಿ ರೈಲ್ವೆ ಖಾಸಗೀಕರಣ ವಿರೋಧಿ ಅಭಿಯಾನದ ಕಾರ್ಯಕರ್ತರು ಮಂಗಳವಾರ ಧಾರವಾಡದ ರೈಲ್ವೆ ನಿಲ್ದಾಣದ ಎದುರು ಪ್ರತಿಭಟನೆ ನಡೆಸಿದರು.

ಬಹುಪಾಲು ಸಾಮಾನ್ಯ ಜನರು ರೈಲ್ವೆಯ ಮೇಲೆ ಅವಲಂಭಿತರಾಗಿದ್ದಾರೆ. ಇಂತಹ ಬಿಕ್ಕಟ್ಟಿನ ಸಂದರ್ಭದಲ್ಲಿ ರೈಲ್ವೆ ಇಲಾಖೆಯು ಪ್ಲಾಟ್ ಫಾರ್ಮ್ ಟಿಕೆಟ್ ಶುಲ್ಕವನ್ನು 50 ರೂಪಾಯಿಗೆ ಏರಿಕೆ ಮಾಡಿದೆ. ಮತ್ತೊಂದೆಡೆ ಪ್ರತಿದಿನ ಹುಬ್ಬಳ್ಳಿಯಿಂದ ಬೆಂಗಳೂರಿಗೆ ಸಂಚರಿಸುವ ಪ್ಯಾಸೆಂಜರ್ ರೈಲುಗಳನ್ನು ಎಕ್ಸ್‌ಪ್ರೆಸ್ ಗಳನ್ನಾಗಿ ಪರಿವರ್ತಿಸಿರುವುದರಿಂದ ಈ ಮಾರ್ಗದಲ್ಲಿ ಬರುವ ಹಲವಾರು ಪಟ್ಟಣಗಳಲ್ಲಿ, ಹಳ್ಳಿಗಳ ನಿಲ್ದಾಣಗಳಲ್ಲಿ ನಿಲುಗಡೆ ನೀಡುವುದಿಲ್ಲ . ಇದರಿಂದ ಆ ಭಾಗದ ಜನಸಾಮಾನ್ಯರು, ಅಂಗವಿಕಲರು, ಉದ್ಯೋಗಿಗಳು , ವಿದ್ಯಾರ್ಥಿಗಳು ಪರದಾಡುವಂತಾಗಿದೆ. ಕೂಡಲೇ ಪ್ಲಾಟ್ ಫಾರ್ಮ ದರ ಕಡಿಮೆ ಮಾಡಬೇಕು ಹಾಗೂ ಹುಬ್ಬಳ್ಳಿ, ಬೆಂಗಳೂರು ಮಧ್ಯೆ ಮೊದಲಿನಂತೆಯೇ ರೈಲು ಸಂಚಾರಕ್ಕೆ ಅವಕಾಶ ಮಾಡಿಕೊಡಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.

Edited By : Manjunath H D
Kshetra Samachara

Kshetra Samachara

10/11/2020 01:13 pm

Cinque Terre

15.42 K

Cinque Terre

5

ಸಂಬಂಧಿತ ಸುದ್ದಿ