ಹುಬ್ಬಳ್ಳಿ: ವಾಣಿಜ್ಯ ನಗರಿಯಲ್ಲಿನ ಜನತೆ ಒಂದಿಲ್ಲಾ ಒಂದು ಮೂಲಭೂತ ಸೌಕರ್ಯಗಳಿಂದ ಬಳಲುತ್ತಿದ್ದಾರೆ. ಅಧಿಕಾರಿಗಳಿಗೆ ಸಮಸ್ಯೆ ಹೇಳಿಕೊಂಡರೇ ಅವರಿಗೆ ಅವಾಜ ಹಾಕುವ ಸಂದರ್ಭ ನಡೆದಿದೆ.....
ಹೀಗೆ ಕುಟುಂಬಸ್ಥರೆಲ್ಲರು, ಮೂಗು ಮುಚ್ಚಿಕೊಂಡು ಅಧಿಕಾರಿಗಳಿಗೆ ಬೈಯುತ್ತಿರುವ ದೃಶ್ಯಗಳು ಕಂಡು ಬಂದಿದ್ದು, ನಗರದ ವಿರಾಪೂರ ಓಣಿಯ 18 ನಂ ಶಾಲೆಯ ಹತ್ತಿರ.ಕಳೆದ ಒಂದು ತಿಂಗಳಿನಿಂದ ಚರಂಡಿ ಒಡೆದು, ಮನೆಯಲ್ಲಿ ನೀರು ನುಗ್ಗಿದೇ. ಇದರಿಂದ ಕುಟುಂಬಸ್ಥರು ಚರಂಡಿ ವಾಸನೆ ತಾಳಲಾರದೆ ಗೊಳಾಡುತ್ತಿದ್ದಾರೆ. ಇನ್ನು ಚರಂಡಿ ಅವ್ಯವಸ್ಥೆ ಬಗ್ಗೆ ಪಾಲಿಕೆ ಅಧಿಕಾರಿಗಳ ಗಮನಕ್ಕೆ ತಂದರು ಸಹ, ಯಾವುದೇ ಪ್ರಯೋಜನವಾಗಿಲ್ಲ, ಘಟನಾ ಸ್ಥಳಕ್ಕೆ ಭೇಟಿ ನೀಡಿದ ಅಧಿಕಾರಿಗಳು ಸಮಸ್ಯೆ ಬಗ್ಗೆ ಹೇಳಿದ ಸ್ಥಳೀಯರಿಗೆ, ಅವಾಜ್ ಹಾಕುತ್ತಾರೆ ಎಂಬ ಆರೋಪ ಕೇಳಿ ಬಂದಿದೆ.
ಇನ್ನೂ ಚರಂಡಿ ಒಡೆದು ಮನೆಯಲ್ಲಿನೀರು ನುಗ್ಗಿದ ಪರಿಣಾಮ, ಅಡುಗೆ ಮಾಡಿ ಊಟ ಮಾಡಲು ಸಹ ತೊಂದರೆಯಾಗುತ್ತಿದೆ. ಇದರಿಂದ ರೊಚ್ಚಿಗೆದ್ದ ಸ್ಥಳಿಯರು ರಸ್ತೆ ತಡೆದು ಸಮಸ್ಯೆ ಬಗೆ ಹರಿಸುವಂತೆ, ಪಾಲಿಕೆ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ರಸ್ತೆಯಲ್ಲಿನ ಚರಂಡಿ ಒಡೆದ ಪರಿಣಾಮ, ಓಣಿಯಲ್ಲಿ ಗಬ್ಬು ವಾಸನೆ ಜೊತೆಗೆ ಮಕ್ಕಳು ಅದರಲ್ಲಿ ಬಿದ್ದರೆ ಹೇಗೆ ಎಂಬ ಸ್ಥಳಿಯರಿಗೆ ಆತಂಕ ಮೂಡಿದೆ.
ಕೂಡಲೇ ಸಮಸ್ಯೆ ಬಗೆಹರಿಸದಿದ್ದರೆ, ಮುಂದಿನ ದಿನಗಳಲ್ಲಿ ಸಂಪೂರ್ಣವಾಗಿ ರಸ್ತೆ ತಡೆದು ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ....!
Kshetra Samachara
08/11/2020 04:11 pm