ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಬೆಳೆಯೂ ಇಲ್ಲ ಪರಿಹಾರವೂ ಇಲ್ಲ; ನೊಂದ ರೈತನ ಬದುಕಿನಲ್ಲಿ ಆಟವಾಡತಿದ್ಯಾ ಸರ್ಕಾರ!

ಹುಬ್ಬಳ್ಳಿ: ಅತಿವೃಷ್ಟಿಯಿಂದ ಅನ್ನದಾತನ ಬದುಕು ಬೀದಿಗೆ ಬಿದ್ದಿದೆ. ಬೆಳೆ ಕಳೆದುಕೊಂಡು‌ ತಿಂಗಳು ಕಳೆದ್ರೂ ರೈತನಿಗೆ ಸಿಕ್ಕಿಲ್ಲ ‌ನೈಯಾ ಪೈಸೆ ಪರಿಹಾರ. ಕಣ್ಣು ಮುಚ್ಚಿ ಕುಳಿತ ಸರ್ಕಾರದ ನಡೆಯಿಂದ ದಿಕ್ಕು ತೋಚದಂತಾದ ರೈತಾಪಿ ವರ್ಗ ಕಣ್ಣೀರಿನಲ್ಲಿ ಕೈ ತೊಳೆಯುತ್ತಿದೆ.

ಹೌದು.. ಮಳೆಯಿಂದ ಧಾರವಾಡ ಜಿಲ್ಲೆಯಲ್ಲಿ 1.30 ಲಕ್ಷ ಹೆಕ್ಟೇರ್ ಪ್ರದೇಶದ ಬೆಳೆ ಹಾನಿಯಾಗಿದ್ದು, ಅತ್ತ ಪರಿಹಾರವೂ ಇಲ್ಲಾ, ಇತ್ತ ಬೆಳೆಯೂ ಇಲ್ಲ. ಇದರಿಂದಾಗಿಯೇ ಹಣೆಯ ಮೇಲೆ ಕೈಹೊತ್ತು ಕುಳಿತ ರೈತ ದಿಕ್ಕು ತೋಚದೇ ಕಂಗಾಲಾಗಿದ್ದಾನೆ. ಕಟಾವು ಮಾಡುವ ಸಮಯದಲ್ಲಿಯೇ ಅತಿವೃಷ್ಟಿಯಾಗಿದ್ದು, ಅತಿವೃಷ್ಟಿಯಿಂದ ನಲುಗಿದ ಅನ್ನ ನೀಡುವ ಅನ್ನದಾತನ ಬದುಕು ಹೇಳ ತೀರದಾಗಿದೆ.

ಇನ್ನೂ ಸಾಲ ಶೂಲ ಮಾಡಿ ಬಿತ್ತನೆ ಮಾಡಿ, ಬೆಳೆಯ ನಿರೀಕ್ಷೆಯಲ್ಲಿದ್ದ ರೈತ‌ನಿಗೆ ಈ ಬರ ಸಿಡಿಲು ಬಡೆದಂತಾಗಿದೆ. ಅತಿಯಾದ ಮಳೆಯಿಂದ ಬೆಳೆಗಳು ಕೊಳೆತು ಹೋಗಿದ್ದು, ಗೋವಿನಜೋಳ, ಹೆಸರು, ಸೋಯಾಬಿನ್, ಉದ್ದು ಸೇರಿದಂತೆ ಅನೇಕ ಬೆಳೆಗಳು ಸಂಪೂರ್ಣ ಹಾಳಾಗಿದೆ. ರೈತನ ಜಮೀನುಗಳಿಗೆ ಭೇಟಿ ನೀಡಿ ವರದಿ ಸಿದ್ದ ಪಡಿಸಿದ ಅಧಿಕಾರಿಗಳು, ಸರ್ಕಾರಕ್ಕೂ ವರದಿಯ ನೀಡಿದ್ದಾರೆ. ಅಷ್ಟೇ ಅಲ್ಲದೇ ಅತಿವೃಷ್ಟಿ ಪ್ರದೇಶಕ್ಕೆ ಕೇಂದ್ರ ನೆರೆ ಅಧ್ಯಯನ ತಂಡ ಭೇಟಿ ನೀಡಿದ್ದರೂ ಒಂದೇ ಒಂದು ರೂಪಾಯಿ ಪರಿಹಾರ ರೈತನ‌ ಕೈ ಸೇರಿಲ್ಲ.

ರೈತನ ಕಣ್ಣೀರು ಒರೆಸಬೇಕಾದ ಸರ್ಕಾರ‌ ಪೂಲ್ ಸೈಲೆಂಟ್ ಆಗಿದ್ದು, ತಮ್ಮ ತಮ್ಮ ರಾಜಕೀಯ ತಿಕ್ಕಾಟದಲ್ಲಿ ಅನ್ನದಾತನನ್ನ ಮರೆತ ಜನಪ್ರತಿನಿಧಿಗಳಿಂದ ಪರಿಹಾರಕ್ಕಾಗಿ ಚಾತಕ ಪಕ್ಷಿಯಂತೆ ರೈತರು ಕಾಯುತ್ತ ಕುಳಿತುಕೊಂಡಿದ್ದಾರೆ. ಹೀಗಿದ್ದರೂ ಸರ್ಕಾರ ಮಾತ್ರ ಮಾತು ಬಿಚ್ಚುತ್ತಿಲ್ಲ.

Edited By :
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

21/09/2022 05:14 pm

Cinque Terre

41.04 K

Cinque Terre

0

ಸಂಬಂಧಿತ ಸುದ್ದಿ