ಹುಬ್ಬಳ್ಳಿ : ಸ್ವಾಮಿ ಇಲ್ಲೋಂದು ರಸ್ತೆ ಅವ್ಯವಸ್ಥೆಯೆ ಸಾರ್ವಜನಿಕರ ಸಂಚಾರಕ್ಕೆ ಮಾರಕವಾದ ಪರಿಣಾಮ ಜನ್ರೂ ಹತ್ತಿರದ ಕೇವಲ 7 ಕಿ.ಮೀ ಮಾರ್ಗ ಕೈ ಬಿಟ್ಟು ಇಲ್ಲಿಯ ಜನ 15 ಕಿ.ಮೀ ಸಂಚಾರ ಮಾಡಿ ಪಕ್ಕದೂರನ್ನ ಸೇರ್ತಾಯಿದ್ದು ಈ ರಸ್ತೆ ಕರ್ನಾಟಕ ಭೂಪಟದಲ್ಲಿ ಇದೆಯೋ ಇಲ್ವೋ ಎಂದು ಪ್ರಶ್ನೇ ಮಾಡ್ತಾ ಇದ್ದಾರೆ.
ಇದೋ ಈ ರಸ್ತೆಯುದ್ದಕ್ಕೂ ಗುಂಡಿ, ತಗ್ಗು, ಕಲ್ಲು, ಮಣ್ಣುಗಳನ್ನ ತುಂಬಿಕೊಂಡಿರುವ ರಸ್ತೆ ಹುಬ್ಬಳ್ಳಿ ತಾಲೂಕು ಹಳ್ಯಾಳ ಗ್ರಾಮದಿಂದ ಅದರಗುಂಚಿಗೆ ಸೇರುತ್ತಿದ್ದು ನಿತ್ಯ ಈ ರಸ್ತೆಗೆ ಹೊಂದಿಕೊಂಡಿರುವ ರೈತರಿಗೆ ಅನಾನುಕೂಲತೆ ಕಾಡುತ್ತಿದ್ದು ಟ್ರ್ಯಾಕ್ಟರ್, ಎತ್ತು ಚಕ್ಕಡಿ ಸಾಗಾಟವೇ ದುಸ್ಥರವಾಗಿ ಪಂಚರ್ ಆದ ವಾಹನ ಅಪಘಾತಕ್ಕೆ ತುತ್ತಾದ ಜನರಿಗೆ ಲೆಕ್ಕವಿಲ್ಲ.
ಇನ್ನು ಈ ರಸ್ತೆ ಸಂಚಾರದ ಮೂಲಕ ಅದರಗುಂಚಿ ಕ್ವಾನೆಂಟ್ ಶಾಲೆಗೆ ಹಳ್ಯಾಳ ಗ್ರಾಮದ ಮಕ್ಕಳು ಹೋಗುತ್ತಿದ್ದು ರಸ್ತೆ ಹಾಳಾದ ಪರಿಣಾಮ ನಾಳೆ ಶಾಲೆ ಆರಂಭವಾಗಿದ್ರೇ ಮಕ್ಕಳ ಗತಿ ಏನು ? ಎಂಬ ಭಯ ಶುರುವಾಗಿದೆ ರಸ್ತೆ ಎತ್ತರಕ್ಕೆ ಚರಂಡಿ ಇದ್ದು ರಸ್ತೆ ಎಡ ಬಲದಲ್ಲಿ ಮುಳ್ಳು, ಕಂಟಿಗಳು ಬೆಳೆದು ವಾಹನ ಸಂಚಾರಕ್ಕೆ ಅಡೆತಡೆ ಉಂಟುಮಾಡಿ ಕಣ್ಣಿಗೆ ಪರಚುವಂತಿದೆ ರಸ್ತೆ ನಡುವೆ ಇರುವ ಬ್ರಿಡ್ಜ್ ಹಳ್ಳದ ನೀರಿನ ಸೆಳೆವಿಗೆ ಬಿದ್ದು ಹೋಗಿದೆ ಈ ಬಗ್ಗೆ ಸಂಬಂಧಪಟ್ಟ ಲೋಕೋಪಯೋಗಿ ಅಧಿಕಾರಿಗಳು ಗಮನಿಸಿ ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.
Kshetra Samachara
20/10/2020 03:51 pm