ಕುಂದಗೋಳ: ಪರೀಕ್ಷೆ ಸಮಯದಲ್ಲಿ ವಿದ್ಯಾರ್ಥಿಗಳು ಓದೋದ್ರಲ್ಲಿ ಬ್ಯುಸಿಯಾಗಿರ್ತಾರೆ.. ಆದ್ರೆ ಈ ಹಾಸ್ಟೆಲ್ ನ ವಿದ್ಯಾರ್ಥಿಗಳಿಗೆ ಓದಿನ ಜೊತೆಗೆ ಇಲ್ಲಿನ ಅವ್ಯವಸ್ಥೆಯ ಟೆನ್ಷನ್ ಕೂಡಾ ಕಾಡ್ತಿದೆ. ಹೌದು.. ಇದು ಕುಂದಗೋಳದ ಅಲ್ಪ ಸಂಖ್ಯಾತರ ಮೆಟ್ರಿಕ್ ನಂತರದ ಬಾಲಕರ ವಿದ್ಯಾರ್ಥಿ ನಿಲಯ. ಇಲ್ಲಿರುವ ವಿದ್ಯಾರ್ಥಿಗಳಿಗೆ ಈಗಾಗಲೇ ಬಿಎ. ಬಿ.ಕಾಮ್ ಪರೀಕ್ಷೆ ಆರಂಭವಾಗಿವೆ. ಇನ್ನೂ ಇದೇ ಎಪ್ರಿಲ್ 22ಕ್ಕೆ ದ್ವೀತಿಯ ಪಿಯುಸಿ, ಹಾಗೂ ಎಪ್ರಿಲ್ 18ಕ್ಕೆ ಪ್ರಥಮ ಪಿಯುಸಿ ಪರೀಕ್ಷೆಗಳಿದ್ದರೂ ಈ ಮಕ್ಕಳ ವಸತಿ ನಿಲಯದಲ್ಲಿ ಕಳೆದ ಒಂದು ವಾರದಿಂದ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ. ಇದ್ರಿಂದ ವಿದ್ಯಾರ್ಥಿಗಳಿಗೆ ತುಂಬಾನೆ ಸಮಸ್ಯೆಯಾಗ್ತಿದೆ. ರಾತ್ರಿ ಮೇಣದ ಬತ್ತಿಯ ಬೆಳಕಲ್ಲಿ ಓದಬೇಕಾದ ಪರಿಸ್ಥಿತಿ ಇದೆ.
ಇದಲ್ಲದೆ ವಸತಿ ನಿಲಯದಲ್ಲಿ ಸ್ನಾನ ಮಾಡಲು, ಶೌಚಾಲಯಕ್ಕೆ ಹೋಗಲು, ಅಷ್ಟೇ ಯಾಕೆ ವಿದ್ಯುತ್ ಸಂಪರ್ಕ ಇಲ್ಲದ ಕಾರಣ ಮೋಟಾರ್ ಬಂದ್ ಆಗಿದ್ದು ಕುಡಿಯಲು ಸಹ ನೀರಿಲ್ಲ. ವಿದ್ಯಾರ್ಥಿಗಳು ಮೊಬೈಲ್ ಜಾರ್ಜ್ ಮಾಡಲು ಸಹ ಅಕ್ಕಪಕ್ಕದ ಮನೆ ಹುಡುಕಿಕೊಂಡು ಹೋಗುವ ಸ್ಥಿತಿ ಇದೆ.
ಈ ಬಗ್ಗೆ ಮಕ್ಕಳು ಹಾಸ್ಟೆಲ್ ಇನ್ ಜಾರ್ಜ್ ವಾರ್ಡನ್ ನಜೀರ್ ಮುಲ್ಲಾ ಅವರಿಗೆ ಕರೆ ಮಾಡಿದ್ರೇ, ಅವ್ರು ಇದಕ್ಕೂ ನಮಗೂ ಸಂಬಂಧವೇ ಇಲ್ಲ ಎಂಬಂತೆ ಮಾತನಾಡ್ತಿದ್ದಾರೆ. ಇನ್ನು ಸಂಪೂರ್ಣ ಕತ್ತಲು ಕವಿದ ಹಾಸ್ಟೆಲ್ ಒಳಗೆ ಅಡುಗೆಯವರು ಏನು ಮಾಡುತ್ತಾರೋ ಅದನ್ನೇ ಕಣ್ಣು ಮುಚ್ಚಿ ತಿನ್ನಬೇಕಾದ ಅನಿವಾರ್ಯತೆ ಮಕ್ಕಳಿಗೆ ಎದುರಾಗಿದೆ. ನೀರು ಹೊತ್ತು ತಂದು ಸ್ನಾನಕ್ಕೆ ಶೌಚಾಲಯಕ್ಕೆ ಬಳಸುವ ಸ್ಥಿತಿ ನಿರ್ಮಾಣವಾಗಿದೆ.
ಪಬ್ಲಿಕ್ ನೆಕ್ಸ್ಟ್ ವಿಶೇಷ : ಶ್ರೀಧರ ಪೂಜಾರ
Kshetra Samachara
05/04/2022 07:50 pm