ಅಳ್ನಾವರ: ಮಕ್ಕಳ ಮುಂದಿನ ಉಜ್ವಲ ಭವಿಷಕ್ಕಾಗಿ ಶಿಕ್ಷಣ ಅತ್ಯಮೂಲ್ಯವಾದದ್ದು. ಅದಕ್ಕಾಗಿಯೇ ಸರ್ಕಾರ ಅನೇಕ ಬಗೆಯ ಯೋಜನೆಗಳನ್ನ ಜಾರಿಗೊಳಿಸಿದೆ.ಆದರೆ ಇಲ್ಲೊಂದು ಶಾಲೆಯಲ್ಲಿ ಮೂಲಭೂತ ಸೌಕರ್ಯಗಳಿಲ್ಲದೆ ಮಕ್ಕಳು ಹಿಂಸೆ ಅನುಭವಿಸುತ್ತ ಶಿಕ್ಷಣ ಪಡೆಯುತ್ತಿರುವುದು ಅತ್ಯಂತ ಭೀಕರ ಸಂಗತಿ.
ಹೌದು. ನಾವು ಹೇಳಲು ಹೊರಟಿರುವುದು ಅಳ್ನಾವರ ಪಟ್ಟಣದ ಆಶ್ರಯಕಾಲನಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಅವ್ಯವಸ್ಥೆಯನ್ನ. 2007 ರಲ್ಲಿ ಪ್ರಾರಂಭವಾದ ಈ ಶಾಲೆಯಲ್ಲಿ ಸುಮಾರು 50 ಮಕ್ಕಳು ಇಲ್ಲಿ ಶಿಕ್ಷಣ ಪಡೆಯುತ್ತಾರೆ.ಆದರೆ ಆ ಮಕ್ಕಳು ತಮ್ಮ ಜೀವ ಕೈಯಲ್ಲಿ ಹಿಡಿದು ಅಭ್ಯಾಸ ಮಾಡಬೇಕಾದೆ.
ಈ ಶಾಲೆಗೆ ವಿದ್ಯುತ್ ಸೌಲಭ್ಯ ವಿಲ್ಲ.ಪುರಾತನ ಕಾಲದಂತೆ ಭಾಸವಾಗುವ ಶೌಚಾಲಯ ವಿದೆ. ಅದಕ್ಕೆ ನೀರಿನ ವ್ಯವಸ್ಥೆ ಇಲ್ಲ.ಪಟ್ಟಣ ಪಂಚಾಯಿತಿ ಯವರ ನಿರ್ಲಕ್ಷದಿಂದ ಶಾಲೆಗೆ ಇದ್ದ ಕಂಪೌಂಡ್ ಬಿದ್ದು ಹೋಗಿದೆ.ಶಾಲೆಯ ಪಕ್ಕದಲ್ಲಿಯೇ ಕೆರೆ ಇರುವುದರಿಂದ ಕೆರೆ ತುಂಬಿದಾಗ ನೀರೆಲ್ಲ ಶಾಲೆಯ ಒಳಗಡೇನೆ ಬಂದು ಶಾಲೆಯ ಕಟ್ಟಡಗಳೆಲ್ಲ ಶಿಥಿಲಗೊಂಡಿವೆ.ಪಟ್ಟಣ ಪಂಚಾಯಿತಿ ಯವರಿಗೆ ಇದಕ್ಕೆ ಸಂಬಂಧ ಪಟ್ಟಂತೆ ಅನೇಕ ಬಾರಿ ದೂರು ನೀಡಿದರೂ ಪ್ರಯೋಜನ ವಾಗಿಲ್ಲ.
ಪಟ್ಟಣ ಪಂಚಾಯಿತಿ ಸದಸ್ಯರು,ಅಧ್ಯಕ್ಷ, ಉಪಾಧ್ಯಕ್ಷರು ಚುನಾಯಿತ ಪ್ರತಿನಿಧಿಗಳು ಇತ್ತ ಕಡೆ ಗಮನ ಹರಿಸದೆ ಇರುವುದು ವಿಷಾದಕರ ಸಂಗತಿ.ಈ ಶಾಲೆಗೆ ವಿದ್ಯುತ್ ವ್ಯವಸ್ಥೆ,ಶಾಶ್ವತ ನೀರನ್ನ ಒದಗಿಸುವುದು,ಶಾಲೆಯ ಸುತ್ತ ಕಂಪೌಂಡ್ ನಿರ್ಮಾಣ ಮಾಡುವ ಕಾರ್ಯವನ್ನ ಪಟ್ಟಣ ಪಂಚಾಯಿತಿಯವರು ಮಾಡಬೇಕಿದೆ.ಇನ್ನಾದರೂ ಇಲ್ಲಿನ ಸಮಸ್ಯೆ ಗೆ ಶಾಶ್ವತ ಪರಿಹಾರ ದೊರೆಯಬೇಕಾಗಿದೆ.
ಮಹಾಂತೇಶ ಪಠಾಣಿ
ಪಬ್ಲಿಕ್ ನೆಕ್ಸ್ಟ್
ಅಳ್ನಾವರ.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
17/03/2022 08:37 pm