ಧಾರವಾಡ: ಧಾರವಾಡ ಜಿಲ್ಲಾಧಿಕಾರಿ ಕಚೇರಿ ಒಡೆತನದಲ್ಲಿರುವ ಕ್ಯಾಂಟೀನ್ ಇದೀಗ ಬಂದ್ ಆಗಿದೆ. ಕ್ಯಾಂಟೀನ್ ಮೂಲ ಮಾಲೀಕರು ಬಾಕಿ ಹಣ ತುಂಬದೇ ಇದ್ದದ್ದರಿಂದ ಇದೀಗ ಕ್ಯಾಂಟೀನ್ ಗೆ ಜಿಲ್ಲಾಧಿಕಾರಿ ಕಚೇರಿಯು ಬೀಗ ಮುದ್ರೆ ಹಾಕಿದೆ.
ಹಲವು ವರ್ಷಗಳಿಂದ ಕ್ಯಾಂಟೀನ್ ನಡೆಸುತ್ತಿದ್ದ ಮೂಲ ಮಾಲೀಕರು ಪ್ರತಿವರ್ಷ ತುಂಬಬೇಕಾದ ಬಾಬತ್ತು ತುಂಬದೇ ಸುಮಾರು 8 ಲಕ್ಷ ರೂಪಾಯಿ ಬಾಕಿ ಇರಿಸಿಕೊಂಡಿದ್ದರು. ಮಾಲೀಕರು ಇದನ್ನು ತುಂಬದೇ ಬೇರೊಬ್ಬರಿಗೆ ಕ್ಯಾಂಟೀನ್ ನಡೆಸಲು ನೀಡಿದ್ದರು.
ಜಿಲ್ಲಾಧಿಕಾರಿ ಕಚೇರಿ ಆಡಳಿತ ವರ್ಗವು ಹಲವು ಬಾರಿ ಬಾಕಿ ಹಣ ತುಂಬುವಂತೆ ಕ್ಯಾಂಟೀನ್ ನವರಿಗೆ ಹೇಳಿದರೂ ಪ್ರಯೋಜನವಾಗದ ಕಾರಣ ಇದೀಗ ಕ್ಯಾಂಟೀನ್ ಗೆ ಬೀಗ ಮುದ್ರೆ ಜಡಿಯಲಾಗಿದೆ.
ಪ್ರತಿನಿತ್ಯ ನೂರಾರು ಜನ ಈ ಕ್ಯಾಂಟೀನ್ ಗೆ ಬರುತ್ತಿದ್ದರು. ಸದ್ಯ ಇದು ಬಂದ್ ಆಗಿರುವುದರಿಂದ ಸಾರ್ವಜನಿಕರಿಗೆ ಸಾಕಷ್ಟು ತೊಂದರೆಯಾದಂತಾಗಿದೆ.
Kshetra Samachara
23/09/2020 10:12 pm