ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ: ಮಳೆ ಬಿಡ್ತಿಲ್ಲ.. ಕಾಮಗಾರಿ ಪೂರ್ಣಗೊಳ್ತಿಲ್ಲ..

ಧಾರವಾಡ: ಧಾರವಾಡ-ಸವದತ್ತಿ ಮಾರ್ಗ ಮಧ್ಯೆ ಇರುವ ಇನಾಂಹೊಂಗಲ ಸೇತುವೆ ಮರು ನಿರ್ಮಾಣ ಕಾಮಗಾರಿ ಈ ವರ್ಷ ಪೂರ್ಣಗೊಳ್ಳುವಂತೆ ಕಾಣುತ್ತಿಲ್ಲ.

ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದ ತಾತ್ಕಾಲಿಕ ರಸ್ತೆ ಮುಳುಗಡೆಯಾಗುತ್ತಲೇ ಇದೆ. ಕಳೆದ ವರ್ಷದ ಪ್ರವಾಹದಿಂದ ಇನಾಂಹೊಂಗಲ ಸೇತುವೆ ಕೊಚ್ಚಿಕೊಂಡು ಹೋಗಿತ್ತು. ಈ ವರ್ಷ ಆ ಸೇತುವೆ ಮರು ನಿರ್ಮಾಣ ಕಾಮಗಾರಿ ಕೂಡ ಕೈಗೆತ್ತಿಕೊಳ್ಳಲಾಗಿತ್ತು.

ಆದರೆ, ಈ ವರ್ಷವೂ ಮಳೆ ನಿರಂತರವಾಗಿ ಸುರಿಯುತ್ತಿರುವುದರಿಂದ ತುಪ್ಪರಿ ಹಳ್ಳ ತುಂಬಿ ಬರುತ್ತಿದೆ. ಇದರಿಂದ ಇನಾಂಹೊಂಗಲ ಸೇತುವೆ ಪಕ್ಕವೇ ತಾತ್ಕಾಲಿಕ ರಸ್ತೆ ಮಾಡಲಾಗಿದ್ದು, ಹಳ್ಳದದಿಂದಾಗಿ ಆ ರಸ್ತೆ ಮುಳುಗಡೆಯಾಗುತ್ತಲೇ ಇದೆ. ಇದು ಕಾಮಗಾರಿಗೂ ಅಡ್ಡಿಪಡಿಸುತ್ತಿದೆ. ನಿನ್ನೆ ರಾತ್ರಿಯಿಂದ ಸುರಿಯುತ್ತಿರುವ ಮಳೆಯಿಂದ ಮತ್ತೆ ತುಪ್ಪರಿ ಹಳ್ಳ ತುಂಬಿ ಬಂದಿದ್ದು, ಸಂಚಾರ ಮತ್ತೆ ಬಂದ್ ಆಗಿದೆ.

Edited By : Nagesh Gaonkar
Kshetra Samachara

Kshetra Samachara

26/09/2020 06:18 pm

Cinque Terre

25.63 K

Cinque Terre

2

ಸಂಬಂಧಿತ ಸುದ್ದಿ