ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಜುಲೈ 3ಕ್ಕೆ ಶಿವಶಿಂಪಿ ಸಮಾಜ ಸಂಘದಿಂದ ಪ್ರತಿಭಾವಂತ ಮಕ್ಕಳಿಗೆ ಸನ್ಮಾನ ಕಾರ್ಯಕ್ರಮ

ಹುಬ್ಬಳ್ಳಿ: ಆನಂದನಗರ ಲಿಂಗಾಯತ ಶಿವಶಿಂಪಿ ಸಮಾಜ ಸಂಘದ ವತಿಯಿಂದ, ಶಿವಶಿಂಪಿ ಸಮಾಜದ ಪ್ರತಿಭಾವಂತ ಮಕ್ಕಳಿಗೆ, ರಾಜ್ಯ ಮಟ್ಟದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಜುಲೈ 3 ರಂದು ನಗರದ ಗೋಕುಲ ರಸ್ತೆ ಏರಪೋರ್ಟ್ ಹತ್ತಿರ ಇರುವ ಗ್ಯಾಲಾಕ್ಷಿ ಹಾಲ್ ನಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಸಂಘದ ಅಧ್ಯಕ್ಷ ಡಾ. ಪ್ರಭಾಕರ್.ಶಿ. ಶಿವಶಿಂಪಿ ತಿಳಿಸಿದರು.

ಈ ಕಾಯಕ್ರಮದಲ್ಲಿ ಸಮಾಜದ ಎಸ್ಎಸ್ಎಲ್‌ಸಿ ಪಿಯುಸಿ ಪದವಿ , ಸ್ನಾತಕೋತ್ತರ ಪದವಿ ಪಡೆದಿರುವ ಹಾಗೂ ಪರೀಕ್ಷೆಯಲ್ಲಿ ಹೆಚ್ಚು ಅಂಕಗಳಿಸಿರುವ ಪ್ರತಿಭಾವಂತ ಮಕ್ಕಳನ್ನು ಗುರುತಿಸಿ, ಅವರ ಪ್ರತಿಭೆಗೆ ಪುರಸ್ಕಾರ ನೀಡಲಾಗುವುದು. ಈಗಾಗಲೇ ನೋಂದಣಿ ಮಾಡಿದ ಎಲ್ಲರೂ ತಪ್ಪದೇ ಭಾಗವಹಿಸಿ ಪುರಸ್ಕಾರವನ್ನು ಪಡೆಯಬಹುದಾಗಿದೆ. ಈ ಕಾರ್ಯಕ್ರಮದಲ್ಲಿ ಶಿಕ್ಷಣದ ಬಗ್ಗೆ ಅಪಾರ ಅನುಭವ , ಪಾಂಡಿತ್ಯ ಹೊಂದಿರುವ ವಿಶ್ವನಾಥ ನಾಗರಾಣ ಇವರು ಮುಖ್ಯ ಅತಿಥಿಗಳಾಗಿ ಅಗಮಿಸಿ, ಸಮಾಜದ ಪ್ರತಿಭಾವಂತ ಮಕ್ಕಳು ಯಾವ ರೀತಿಯಾಗಿ ಪರಿಶ್ರಮವಹಿಸಿ ತಮ್ಮ ಉಜ್ವಲ ಭವಿಷ್ಯವನ್ನು ಕಟ್ಟಿಕೊಳ್ಳಬೇಕು ಎಂಬುದರ ಕುರಿತಾಗಿ ಅತಿಥಿ ಉಪನ್ಯಾಸ ಮತ್ತು ನೀಡಲಿದ್ದಾರೆ ಎಂದು ತಿಳಿಸಿದರು.

Edited By :
Kshetra Samachara

Kshetra Samachara

01/07/2022 01:08 pm

Cinque Terre

19.76 K

Cinque Terre

0

ಸಂಬಂಧಿತ ಸುದ್ದಿ