ನವಲಗುಂದ : ನವಲಗುಂದ ಪಟ್ಟಣದಲ್ಲಿ ಟ್ರಾಫಿಕ್ ಸಮಸ್ಯೆ ಸರಿ ಹೋಗುವ ಹಾಗೇ ಕಾಣ್ತಾ ಇಲ್ಲ, ಇಂದು ಸಂಜೆ ನವಲಗುಂದ ಪ್ರಮುಖ ರಾಷ್ಟೀಯ ಹೆದ್ದಾರಿ ಟ್ರಾಫಿಕ್ ಜಾಮ್ ಆಗಿ ವಾಹನ ಸವಾರರು ಪರದಾಟ ನಡೆಸುವಂತಾಗಿತ್ತು.
ಈ ಟ್ರಾಫಿಕ್ ಜಾಮ್ ಗೆ ರಸ್ತೆಗಳಲ್ಲೇ ವಾಹನಗಳನ್ನು ಪಾರ್ಕಿಂಗ್ ಮಾಡುವ ಪರಿಣಾಮ ಸಂಚಾರಕ್ಕೆ ಅಡಚಣೆ ಉಂಟಾಗುತ್ತಿದೆ. ಈ ಬಗ್ಗೆ ಕಳೆದ ಬಾರಿ ನಿಮ್ಮ ಪಬ್ಲಿಕ್ ನೆಕ್ಸ್ಟ್ ಕೂಡ ವರದಿಯನ್ನು ಬಿತ್ತರಿಸಿತ್ತು. ಆದರೆ ಸಂಬಂಧ ಪಟ್ಟ ಅಧಿಕಾರಿಗಳು ಇದನ್ನು ಗಂಭೀರವಾಗಿ ಪರಿಗಣಿಸದ ಹಿನ್ನೆಲೆ ಇಂದು ನವಲಗುಂದ ಪ್ರಮುಖ ರಾಷ್ಟೀಯ ಹೆದ್ದಾರಿ ಬಂದ್ ಆದಂತಾಗಿತ್ತು.
Kshetra Samachara
24/12/2020 09:27 pm