ಕುಂದಗೋಳ : ಮಳೆಗಾಲ ಬಂತಂದ್ರೇ ಈ ಕುಂದಗೋಳ ತಾಲೂಕಿನ ರಸ್ತೆಗಳಲ್ಲಿ ತುಂಬಾ ರಾಡಿ ಕೊಳಚೆ ನೀರಿನ ಕಾಟ ಇತ್ತ ಬೇಸಿಗೆ ಬಂತೆಂದರೆ ಧೂಳು ಕಲ್ಲು ಮಣ್ಣುಗಳ ಕಾಟಕ್ಕೆ ಇಲ್ಲಿನ ಜನತೆ ಬೇಸತ್ತು ಹೋಗಿದ್ದಾರೆ.
ಹೌದು ! ಇದೋ ಕುಂದಗೋಳ ತಾಲೂಕಿನ ಶಿರೂರು ಗ್ರಾಮದಿಂದ ಬಸಾಪೂರ ಹಾಗೂ ಹಿರೇನರ್ತಿ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ 6 ಕಿ.ಮೀ ರಸ್ತೆ ಹಾಳಾಗಿ ಹೋಗಿದೆ. ಈ ರಸ್ತೆಯಲ್ಲಿ ವಾಹನ ಸಂಚಾರಕ್ಕೆ ತೊಂದರೆ ಉಂಟಾಗುತ್ತಿದೆ.
ನಿತ್ಯ ಬಸಾಪೂರ, ಹಿರೇನರ್ತಿ, ಶಿರೂರು ಗ್ರಾಮಗಳ ಕೃಷಿ ಚಟುವಟಿಕೆಗೆ ಅನುಕೂಲವಾದ ರಸ್ತೆ ಭಾರಿ ಗಾತ್ರದ ವಾಹನ ಸಂಚಾರಕ್ಕೆ ಸಿಕ್ಕು ಈ ಪಾಟಿ ಧೂಳೆದ್ದಿದೆ. ಪ್ರಯಾಣೀಕರಿಗೆ ರಸ್ತೆ ಮಾರ್ಗ ತೋರಿಸಲು ಅಳವಡಿಸಿದ ಹಿರೇನರ್ತಿ ಗ್ರಾಮದ ಬೋರ್ಡ್ ತಪ್ಪಾಗಿದ್ದರೂ ಇಂದಿಗೂ ಬದಲಾವಣೆ ಕಾಣದಿರುವುದೇ ಇಲ್ಲಿನ ರಸ್ತೆಯ ಅವ್ಯವಸ್ಥೆಗೆ ಸಾಕ್ಷಿಯಾಗಿದೆ.
ವಿಪರೀತ ಮಣ್ಣು ಕಲ್ಲುಗಳೇ ಎದ್ದು ಡಾಂಬರು ಮಾಯವಾದ ಈ ರಸ್ತೆ ಅಭಿವೃದ್ಧಿಗೆ ಮೂರು ಗ್ರಾಮಗಳ ಜನ ಒತ್ತಾಯಿಸಿದ್ದಾರೆ.
Kshetra Samachara
21/12/2020 02:58 pm