ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ: ಸಾರಿಗೆ ಸಂಸ್ಥೆ ನೌಕರರ ಪ್ರತಿಭಟನೆ.. ಪ್ರಯಾಣಿಕರ ಪರದಾಟ

ಧಾರವಾಡ: ಸಾರಿಗೆ ಸಂಸ್ಥೆ ನೌಕರರನ್ನು ಸರ್ಕಾರಿ ನೌಕರರನ್ನಾಗಿ ಪರಿಗಣಿಸುವಂತೆ ಆಗ್ರಹಿಸಿ ಸಾರಿಗೆ ಸಂಸ್ಥೆ ನೌಕರರು ಪ್ರತಿಭಟನೆ ನಡೆಸುತ್ತಿದ್ದು, ಪ್ರಯಾಣಿಕರು ಪರದಾಡುವಂತಾಗಿದೆ.

ರಾಜ್ಯದಾದ್ಯಂತ ನೌಕರರು ಪ್ರತಿಭಟನೆ ನಡೆಸುತ್ತಿದ್ದು, ಧಾರವಾಡದಲ್ಲೂ ಈ ಪ್ರತಿಭಟನೆ ನಡೆದಿದೆ. ಜಿಲ್ಲಾ ಕೇಂದ್ರದಿಂದ ಬೇರೆ ಬೇರೆ ಊರುಗಳಿಗೆ ಹೋಗಬೇಕಿದ್ದ ಬಸ್ಸುಗಳನ್ನು ನೌಕರರು ಡಿಪೊಗೆ ತಲುಪಿಸಿ ಕೆಲಸದಿಂದ ದೂರ ಉಳಿಯುವ ಮೂಲಕ ಮುಷ್ಕರ ನಡೆಸಿದರು.

ಸರ್ಕಾರ ತಮ್ಮನ್ನೂ ಸರ್ಕಾರಿ ನೌಕರರನ್ನಾಗಿ ಪರಿಗಣಿಸಬೇಕು ಎಂಬ ಒತ್ತಾಯ ಈ ನೌಕರರದ್ದಾಗಿದೆ. ಈ ಮುಷ್ಕರ ನಡೆಯುವ ಬಗ್ಗೆ ಮಾಹಿತಿಯೇ ಇರದ ಪ್ರಯಾಣಿಕರು ಬೇರೆ ಬೇರೆ ಕಡೆಗಳಿಂದ ಬಂದು ಬಸ್ಸುಗಳು ಇಲ್ಲದೇ ಹೋಗಿದ್ದರಿಂದ ಪರದಾಡುವಂತಾಯಿತು.

Edited By : Manjunath H D
Kshetra Samachara

Kshetra Samachara

11/12/2020 12:25 pm

Cinque Terre

34.48 K

Cinque Terre

0

ಸಂಬಂಧಿತ ಸುದ್ದಿ