ಅಣ್ಣಿಗೇರಿ : ಇಲ್ಲೊಂದು ಊರಿನ ರಸ್ತೆ ಪಕ್ಕದ ಹಳ್ಳ ವಾಹನ ಸವಾರರು ಹಾಗೂ ಸಂಚಾರಿಗಳನ್ನ ಬಲಿ ಪಡೆಯೋ ಮೊದಲು ಈ ಜನಪ್ರತಿನಿಧಿಗಳು ಎಚ್ಚೆತ್ತುಕೊಳ್ಳಲಿ ಎಂದು ಸಾರ್ವಜನಿಕರು ಕೇಕೆ ಹಾಕಿದ್ರೂ ಅವರನ್ನ ಪರಿಗಣಿಸುವವರೇ ಇಲ್ಲದಾಗಿದೆ.
ಇದ್ಯಾವೂರ ಪರಿಸ್ಥಿತಿ ಅಂದ್ರಾ ? ಇದೇ ಸ್ವಾಮಿ ಅಣ್ಣಿಗೇರಿ ತಾಲೂಕಿನ ನಾವಳ್ಳಿ ಗ್ರಾಮಕ್ಕೆ ಹೊಂದಿಕೊಂಡು ಹರಿಯುವ ಹಂಡಿಗಣ ಹಳ್ಳದ ಕಥೆ ವ್ಯಥೆ. ಈ ಹಳ್ಳದಲ್ಲಿ ಸುತ್ತ ಮುತ್ತಲಿನ ಪ್ರದೇಶಗಳಿಂದ ಹರಿದು ಬರೋ ನೀರು ಈ ನಾವಳ್ಳಿ ಗ್ರಾಮದ ಮೇಲೆ ಹಾಯ್ದು ಬೆಣ್ಣೆ ಹಳ್ಳ ಸೇರುತ್ತದೆ.
ಈ ಹಳ್ಳಕ್ಕೆ ಸರಿಯಾದ ಸೇತುವೆ ಹಾಗೂ ರಸ್ತೆಗೆ ತಡೆಗೋಡೆ ನಿರ್ಮಿಸಿಲ್ಲ ನೋಡಿ. ಈ ಪರಿಣಾಮ ವಾಹನ ಸವಾರರು ತುಸು ಯಾಮಾರಿದ್ರೂ, ಈ ಹಳ್ಳದಲ್ಲಿ ಬಿಳೋದು ಗ್ಯಾರಂಟಿ. ಈ ಬಗ್ಗೆ ಗ್ರಾಮಸ್ಥರು ಹಳ್ಳದ ಅಭಿವೃದ್ಧಿಗೆ ಅಣ್ಣಿಗೇರಿಯ ಮಾಜಿ, ಹಾಲಿ ಶಾಸಕರಿಬ್ಬರಿಗೂ ಮನವಿ ಮಾಡ್ತಾ ಇದ್ದರೂ ಇಂದಿಗೂ ಪ್ರಯೋಜನ ಸಿಕ್ಕಿಲ್ಲ.
ನಿತ್ಯ ಈ ಹಳ್ಳದಲ್ಲಿ ಮಕ್ಕಳು ಮೀನು ಹಿಡಿಯುವುದು, ಹಳ್ಳದ ದಡದಲ್ಲಿ ಮಹಿಳೆಯರು ಬಟ್ಟೆ ಸೆಳೆಯೋದು ಮುಖ್ಯವಾಗಿ ಸಾರಿಗೆ ಬಸ್ ಸೇರಿ ಖಾಸಗಿ ವಾಹನ ಸವಾರರು ಓಡಾಟ ಇದ್ರೂ ಪರಿಹಾರ ಸಿಕ್ಕಿಲ್ಲ. ಈಗಾಗಲೇ ಇದ್ದ ತಡೆಗೋಡೆ ಕಲ್ಲುಗಳು ಹಳ್ಳದಲ್ಲಿ ಬಿದ್ರೂ ಹೋದ್ರು ಯಾರು ಕ್ಯಾರೆ ಎನ್ನುತ್ತಿಲ್ಲ. ಈ ಬಗ್ಗೆ ಜನಪ್ರತಿನಿಧಿಗಳು ಗಮನಿಸಬೇಕಿದೆ.
Kshetra Samachara
08/12/2020 06:33 pm