ಕುಂದಗೋಳ : ಪಟ್ಟಣದ ರಸ್ತೆಗಳ ಗುಂಟ ಕೂತು ಕುಡಿಯುವ ಈ ಹಗಲು ಕುಡುಕರ ಕಾಟಕ್ಕೆ ಸಾರ್ವಜನಿಕರ ಅಷ್ಟೇ ಅಲ್ಲಾ, ಈ ಶಿಕ್ಷಣಸ್ಥ ವಿದ್ಯಾರ್ಥಿ ವಿದ್ಯಾರ್ಥಿನಿಯರು ಶಿಕ್ಷಕರಿಗೂ ಭಯದ ವಾತಾವರಣ ಎದುರಾಗಿದೆ.
ಇದೋ ಕುಂದಗೋಳ ಪಟ್ಟಣದಿಂದ ಬೆಟದೂರಿಗೆ ಸಂಪರ್ಕ ಕಲ್ಪಿಸುವ ರಸ್ತೆ ಪಕ್ಕದ ಜಿ.ಎಸ್.ಪಾಟೀಲ ಕಾಲೇಜಿಗೆ ಹೊಂದಿಕೊಂಡಿರುವ ಮರಗಳ ಅಡಿಯಲ್ಲಿ ಸಾರಾಯಿ ಬಾಟಲಿ, ಗುಟ್ಕಾ ಚೀಟ್, ಸಿಗರೇಟ್ ಪ್ಯಾಕೆಟ್ ಬಿದ್ದಿದ್ದು, ಈ ರಸ್ತೆಗೆ ಹೊಂದಿಕೊಂಡಂತೆ ನಿತ್ಯ ಕುಡುಕರ ಹಾವಳಿ ಅತಿಯಾಗಿದೆ.
ಈ ರಸ್ತೆ ಪಕ್ಕದ ಚರಂಡಿಗಳು ಸಂಪೂರ್ಣ ಈ ಮಧ್ಯದ ಬಾಟಲಿ, ಪ್ಲಾಸ್ಟಿಕ್ ಮಯವಾಗಿದ್ದು. ನಿತ್ಯ ಈ ರಸ್ತೆಯಲ್ಲಿ ಸಂಚರಿಸುವ ಸಭ್ಯಸ್ಥರಿಗೆ ತೊಂದರೆ ಉಂಟಾಗಿದೆ.
ಇನ್ನು ವಿಪರೀತ ಪ್ಲಾಸ್ಟಿಕ್ ಮಧ್ಯದ ಬಾಟಲಿ ಬಿದ್ದ ಪರಿಣಾಮ ರಸ್ತೆ ಚರಂಡಿ ಸಂಪರ್ಕದ ಪೈಪ್ ಗಳು ಮುಚ್ಚಲ್ಪಟ್ಟಿವೆ. ಈ ಬಗ್ಗೆ ಸಂಬಂಧಪಟ್ಟವರು ಸೂಕ್ತ ಕ್ರಮ ಜರುಗಿಸುವಂತೆ ಸ್ಥಳೀಯ ವಿದ್ಯಾರ್ಥಿಗಳ ಪಾಲಕರು ಹಾಗೂ ಸಾರ್ವಜನಿಕರು ಪಬ್ಲಿಕ್ ನೆಕ್ಸ್ಟ್ ಮೂಲಕ ಮನವಿ ಮಾಡಿದ್ದಾರೆ.
Kshetra Samachara
30/11/2020 02:50 pm