ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಗೋಳ : ಕುಡಿಯುವ ನೀರಿನ ಕೆರೆ ಸುತ್ತ ಅನೈರ್ಮಲ್ಯ ಕಸ ಗಂಟಿ ಕೆರೆ ಸ್ವಚ್ಛತೆಗೆ ಜನರ ಅಳಲು

ಕುಂದಗೋಳ : ಹಳ್ಳಿಗಳಲ್ಲಿ ಕೆರೆ ಕಟ್ಟೆ ಕಣಗಳು ತುಂಬಿ ಬಿಟ್ರೇ ಈ ಹಳ್ಳಿಗರ ಮನಸಲ್ಲಿ ಎಲ್ಲಿಲ್ಲದ ಖುಷೀ ಇರುತ್ತೆ ನೋಡಿ. ಈ ಕೆರೆಗಳು ಸಹ ಜನರ ದಾಹ ನೀಗಿಸುವಲ್ಲಿ ಅಷ್ಟೇ ಪ್ರಮುಖ ಪಾತ್ರ ವಹಿಸಿ ಗ್ರಾಮಗಳ ಸೌಂದರ್ಯದ ಪ್ರತೀಕವಾಗಿವೆ.

ಆದ್ರೆ ಪ್ರಸ್ತುತ ದಿನಗಳಲ್ಲಿ ಈ ಕೆರೆಗಳಿಗೆ ನಿರ್ವಹಣೆ ಕೊರತೆ ಎದುರಾಗಿ, ಸುತ್ತಲೂ ಬೆಳೆದ ಕಸ ಕಡ್ಡಿಗಳು ಕೆರೆ ಅಂದದ ಜೊತೆ ಕುಡಿಯುವ ನೀರನ್ನು ಕಲುಷೀತ ಮಾಡಿ ಕೆರೆಗಳು ಅವ್ಯವಸ್ಥೆ ತಾಣವಾಗಿದೆ‌.

ಇದೋ ಕುಂದಗೋಳ ತಾಲೂಕಿನ ಬೆನಕನಹಳ್ಳಿ ಕೆರೆ ಈ ವರ್ಷದ ಅತಿವೃಷ್ಟಿ ಪರಿಣಾಮ ತುಂಬಿದ್ದು, ಕೆರೆ ಸುತ್ತ ಬೆಳೆದ ಕಸ ಹಾಗೂ ಹಳ್ಳದ ನೀರಿನ ಗುಂಟ ತೇಲಿ ಬಂದ ಒಣ ಕಸವನ್ನು ಇಂದಿಗೂ ನಿರ್ವಹಣೆ ಮಾಡಿಲ್ಲ. ಈ ಕಾರಣ ನೀರು ಹಾಳಾಗಿದೆ, ಇನ್ನೂ ಈ ಊರಿಗಿರೋ ಶುದ್ಧ ಕುಡಿಯುವ ನೀರಿನ ಘಟಕ ಒಮ್ಮೆ ಆರಂಭವಾದ್ರೆ ಮತ್ತೊಂದು ದಿನ ಕೆಟ್ಹೋಗುತ್ತೆ, ಹೀಗಾಗಿ ಇಲ್ಲಿನ ಸಾರ್ವಜನಿಕರು ಕೆರೆ ಸ್ವಚ್ಚ ಮಾಡಿ ಖಾಯಂ ಕುಡಿಯುವ ನೀರಿಗೆ ಅನುಕೂಲ ಮಾಡಿ ಎನ್ನುತ್ತಿದ್ದಾರೆ.

Edited By : Manjunath H D
Kshetra Samachara

Kshetra Samachara

27/11/2020 03:15 pm

Cinque Terre

39.85 K

Cinque Terre

0

ಸಂಬಂಧಿತ ಸುದ್ದಿ