ಕಲಘಟಗಿ:ತಾಲೂಕಿನ ತುಮರಿಕೊಪ್ಪ ಗ್ರಾಮದ ಬೆಣಚಿ ಕೆರೆಯ ರಸ್ತೆಯನ್ನು ಅಭಿವೃದ್ಧಿ ಪಡಿಸುವ ಅಗತ್ಯವಿದೆ.
ಕಲಘಟಗಿ ಪಟ್ಟಣಕ್ಕೆ ಕುಡಿಯುವ ನೀರು ಪೂರೈಸುವ ಪ್ರಮುಖ ಮೂಲವಾಗಿರುವ ಬೆಣಚಿ ಕೆರೆಗೆ ತಲುಪುವ ರಸ್ತೆ ಕಚ್ಚಾ ರಸ್ತೆಯಾಗಿದ್ದು, ಕಲ್ಲುಗಳು ಎದ್ದಿವೆ ಇದರಿಂದಾಗಿ ರಸ್ತೆಯ ಅಭಿವೃದ್ಧಿಯ ಅವಶ್ಯಕತೆ ಇದೆ.
ಇಲ್ಲಿ ನೀರು ಪೂರೈಸುವ ಪಂಪ್ ಇದ್ದು ಇಲ್ಲಿ ಪಟ್ಟಣ ಪಂಚಾಯತಿ ಸಿಬ್ಬಂದಿ ಕೆಲಸಕ್ಕಾಗಿ ಹಾಗೂ ದುರಸ್ತಿಯ ಸಮಯದಲ್ಲಿ ಓಡಾಡುಲು ರಸ್ತೆ ಅಭಿವೃದ್ಧಿ ಮಾಡ ಬೇಕಿದೆ.
ಬೆಣಚಿ ಕೆರೆಯ ರಸ್ತೆ ಅಭಿವೃದ್ಧಿ ಮಾಡುವುದರಿಂದ ಇಲ್ಲಿನ ರೈತರಿಗೂ ಸಹ ವ್ಯವಸಾಯ ಉತ್ಪನ್ನ ತರಲು ಅನುಕೂಲವಾಗಲಿದೆ. ಸಂಬಂಧಪಟ್ಟ ಇಲಾಖೆ ಬೆಣಚಿ ಕೆರೆ ರಸ್ತೆ ಅಭಿವೃದ್ಧಿಗೆ ಅನುದಾನ ಕಲ್ಪಿಸ ಬೇಕಿದೆ.
Kshetra Samachara
24/11/2020 01:30 pm