ಹುಬ್ಬಳ್ಳಿ: ರಿಂಗ್ ರೋಡ್ ನಿರ್ಮಾಣ ಮಾಡುವ ಸಂದರ್ಭದಲ್ಲಿ ಹಳ್ಳಿಗಳ ವಾಪ್ತಿಯಲ್ಲಿ ಕಡಿಮೆ ಎತ್ತರದ ಬ್ರಿಡ್ಜ್ ನಿರ್ಮಾಣ ಮಾಡುತ್ತಿರುವುದನ್ನು ಖಂಡಿಸಿ ರೈತ ಮುಖಂಡರು ಹುಬ್ಬಳ್ಳಿ ನೇಕಾರನಗರದ ಹತ್ತಿರ ಪ್ರತಿಭಟನೆ ನಡೆಸಲಾಯಿತು.
ಇದೇ ವೇಳೆ ಮಾತನಾಡಿದ ಬಾಲ ಅಕಾಡೆಮಿ ಅಧ್ಯಕ್ಷ ಈರಣ್ಣ ಜಡಿ ಮಾತನಾಡಿ, ಇಲ್ಲಿ ಗ್ರಾಮೀಣ ಪ್ರದೇಶದಿಂದ ಸಾಕಷ್ಟು ರೈತರ ವಾಹನಗಳು ಕಬ್ಬ ಹಾಗೂ ಬೆಳೆಯನ್ನು ಹೇರಿಕೊಂಡು ಸಂಚರಿಸುತ್ತವೆ.ಇಲ್ಲಿ ಕಡಿಮೆ ಎತ್ತರದ ಬ್ರಿಡ್ಜ್ ನಿರ್ಮಾಣ ಮಾಡುವುದರಿಂದ ಸಾಕಷ್ಟು ತೊಂದರೆ ಆಗುತ್ತದೆ ಕೂಡಲೇ ಬ್ರಿಡ್ಜ್ ಎತ್ತರವನ್ನು ಹೆಚ್ಚಿಸಿ ಸಾರ್ವಜನಿಕರ ಹಿತವನ್ನು ಕಾಪಾಬೇಕು ಎಂದು ಆಗ್ರಹಿಸಿದರು.
ರಿಂಗ್ ರೋಡ್ ನಿರ್ಮಾಣ ಮಾಡುವ ಸಂದರ್ಭದಲ್ಲಿ ರೈತರ ಸಮಸ್ಯೆಗಳನ್ನು ಆಲಿಸದೇ ನಿರ್ಮಾಣ ಮಾಡಿದ್ದೇ ಆದಲ್ಲಿ ಮುಂಬರುವ ದಿನಗಳಲ್ಲಿ ಹೋರಾಟದ ಎಚ್ಚರಿಕೆಯನ್ನು ಪ್ರತಿಭಟನಾಕಾರರು ನೀಡಿದರು.
Kshetra Samachara
23/11/2020 06:38 pm