ನವಲಗುಂದ : ನವಲಗುಂದ ಪಟ್ಟಣದ ಬಸವೇಶ್ವರ ನಗರದಲ್ಲಿರುವ ಕಾಲುವೆಯ ಪರಿಸ್ಥಿತಿ ಇದು, ಕಟ್ಟೆಗಳು ಒಡೆದು ಹೋಗಿವೆ, ಕಸ, ಮುಸುರೆ ಎಸೆಯಲಾಗಿದೆ. ಕಾಲುವೆಯೇ ಕಾಣದ ಹಾಗೇ ಗಿಡಗಳು ಬೆಳೆದು ನಿಂತ ದೃಶ್ಯಗಳನ್ನು ನೋಡ್ತಾ ಇದ್ರೆ ಸರಿಯಾದ ನಿರ್ವಹಣೆಯ ಕೊರತೆ ಇಲ್ಲಿ ಎದ್ದು ಕಾಣುತ್ತಿದೆ.
ಪಟ್ಟಣದ ಬಸವೇಶ್ವರ ನಗರದಲ್ಲಿ ಈ ಕಾಲುವೆ ಹಾದು ಹೋಗುತ್ತೆ ಆದರೆ ಇಲ್ಲಿ ಕಟ್ಟೆ ಒಡೆದು ಹೋಗುವುದಷ್ಟೇ ಅಲ್ಲದೆ ಬಟ್ಟೆಗಳು, ಪ್ಲಾಸ್ಟಿಕ್ ಬಾಟಲ್ ಗಳು, ಕೊಳಚೆಯಾದ ನೀರು, ಹಂದಿಗಳ ವಾಸಸ್ಥಾನವಾಗಿ ಬದಲಾದ ಈ ಸ್ಥಳವನ್ನು ನೋಡ್ತಾ ಇದ್ರೆ ಇಲ್ಲಿ ನಿರ್ವಹಣೆಯ ಕೊರತೆ ತಾಂಡವ ಆಡುತ್ತಿದೆ.
ಇನ್ನೂ ಈ ಕಾಲುವೆಯ ಸ್ವಚ್ಛತೆ ಮಾಡದೇ ನೀರು ಬಿಟ್ಟರೆ, ನೀರು ಕಲುಷಿತವಾಗಿ ಜನರ ಆರೋಗ್ಯ ಹದಗೆಡುವುದರಲ್ಲಿ ಸಂಶಯವೇ ಇಲ್ಲಾ ಎಂಬಂತಾಗಿದೆ. ಆದಷ್ಟು ಬೇಗ ಈ ಕಾಲುವೆಯ ಸರಿಯಾದ ನಿರ್ವಹಣೆ ಮಾಡಬೇಕು ಇಲ್ಲವಾದಲ್ಲಿ ಸಾಂಕ್ರಾಮಿಕ ರೋಗದ ಹರಡುವಿಕೆಯು ಸಹ ಹೆಚ್ಚಿನ ಪ್ರಮಾಣದಲ್ಲಿ ಕಾಣುತ್ತಿದೆ.
Kshetra Samachara
23/11/2020 01:18 pm