ಕುಂದಗೋಳ : ಬೆಳಕಿನ ಹಬ್ಬ ದೀಪಾವಳಿ ಸಡಗರವನ್ನ ನಾವು ನೀವೆಲ್ಲ ದೀಪ ಬೆಳಗಿ ಆಚರಿಸಿದ್ದೇವೆ. ಆದ್ರೆ ಈ ಊರಲ್ಲಿ ಸತತ 30 ವರ್ಷಗಳ ಹೋರಾಟದ ಫಲವಾಗಿ 2 ಎಕರೆ ಸರ್ಕಾರಿ ಜಮೀನನ್ನು ಒತ್ತುವರಿ ಮಾಡಿಕೊಂಡವರಿಂದ ಮರಳಿ ಪಡೆದಿದ್ದಾರೆ. ಅಷ್ಟೇ ಅಲ್ಲ ಅದೇ ಜಾಗದಲ್ಲಿ 250 ಸಸಿಗಳನ್ನು ನೆಡುವ ಮೂಲಕ ದೀಪಾವಳಿ ಆಚರಿಸಿದ್ದಾರೆ.
ಹೌದು! ಕುಂದಗೋಳ ತಾಲೂಕಿನ ಇಂಗಳಗಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪ್ರಾಥಮಿಕ ಆರೋಗ್ಯ ಕೇಂದ್ರದ ಜಾಗವನ್ನು ಅದೇ ಗ್ರಾಮದ ಶಂಕ್ರಪ್ಪ ಯಲಿವಾಳ ಎಂಬುವವರು 30 ವರ್ಷದ ಹಿಂದೆ ಭೂದಾನ ಮಾಡಿದ್ದನ್ನು ಇತರೆ ವ್ಯಕ್ತಿಯೊಬ್ಬ ಒತ್ತುವರಿ ಮಾಡಿಕೊಂಡಿದ್ದರು.
ಆ ಸರ್ಕಾರಿ ಜಾಗವನ್ನು ಸರ್ವೇ ಮಾಡಿಸಿದ ಗ್ರಾಮಸ್ಥರು ಮರಳಿ ಜಾಗ ಪಡೆದಿದ್ದಾರೆ. ಈಗ ಅದೇ ಸರ್ಕಾರಿ ಆಸ್ಪತ್ರೆಯ ವಿಸ್ತಿರ್ಣ ಹೆಚ್ಚಿಸುವ ಆಲೋಚನೆ ಹೊಂದಿದ್ದಾರೆ.
ಹಾಗಾದ್ರೆ ಈ ಜಾಗದ ಕಥೆಯೇನು? ಅವರಿಂದಲೇ ಕೇಳಿ.
ಒಟ್ಟಾರೆ ಸತತ ಹೋರಾಟದ ಫಲದಿಂದ ಇಂಗಳಗಿ ಯರೇಬೂದಿಹಾಳ ಗ್ರಾಮಸ್ಥರು ಒತ್ತುವರಿಯಾದ ಜಾಗವನ್ನು ವಾಪಸ್ ಪಡೆದಿದ್ದಾರೆ. ಅಧಿಕಾರಿಗಳು, ಜನಪ್ರತಿನಿಧಿಗಳಿಂದ ಆಗಬೇಕಿದ್ದ ಕೆಲಸವನ್ನು ಗ್ರಾಮಸ್ಥರೇ ಮಾಡಿ ಸೈ ಎನಿಸಿಕೊಂಡಿದ್ದಾರೆ.
Kshetra Samachara
17/11/2020 12:18 pm