ಹುಬ್ಬಳ್ಳಿ: ಹು-ಧಾ ಮಹಾನಗರ ಪಾಲಿಕೆಯ ಕಾಮಗಾರಿಗಳು ಆಡೋಣ ಬಾ ಕೆಡಿಸೋಣ ಬಾ ಎನ್ನುವಂತಾಗಿದೆ ಎಂಬುವಂತ ಆರೋಪಗಳು ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದೆ.
ಚನ್ನಾಗಿರುವ ಚರಂಡಿಗಳನ್ನು ಕಾಮಗಾರಿ ಹೆಸರಿನಲ್ಲಿ ಒಡೆಯುವಂತ ದುಸ್ಸಾಹಸಕ್ಕೆ ಹು-ಧಾ ಮಹಾನಗರ ಪಾಲಿಕೆ ಮುಂದಾಗಿದೆ ಎಂದು ಸಾರ್ವಜನಿಕರೊಬ್ಬರು ಚನ್ನಾಗಿರುವ ಗಟಾರ ಒಡೆಯುತ್ತಿದ್ದಾರೆ ಎಂದು ವಿಡಿಯೋ ಮಾಡಿ ಪಬ್ಲಿಕ್ ನೆಕ್ಸ್ಟ್ ಗೆ ನೀಡಿದ್ದಾರೆ.
ಹುಬ್ಬಳ್ಳಿಯ ಕೊಯಿನ್ ರೋಡಿನಲ್ಲಿ ಈ ಹಿಂದೆ ನಿರ್ಮಾಣ ಮಾಡಿರುವ ಚರಂಡಿಗಳು ಯಾವುದೇ ರೀತಿಯಲ್ಲಿ ಹಾನಿಯಾಗಿಲ್ಲ ಚನ್ನಾಗಿದ್ದರೂ ಕೂಡ ಹು-ಧಾ ಮಹಾನಗರ ಪಾಲಿಕೆ ಮಾತ್ರ ಆಡೋಣ ಬಾ ಕೆಡಿಸೋಣ ಬಾ ಎನ್ನುವಂತೆ ಮಾಡಿದೆ ಎಂದು ಸ್ಥಳೀಯರು ಅಸಮಾಧಾನ ಹೊರಹಾಕಿದ್ದಾರೆ.
ಕೆಟ್ಟು ಹೋಗಿರುವ ಸ್ಥಳದಲ್ಲಿ ಕಾಮಗಾರಿ ಕೈಗೊಳ್ಳಬೇಕಾದ ಪಾಲಿಕೆ ಅಧಿಕಾರಿಗಳು ಚನ್ನಾಗಿರುವ ಕಡೆಯಲ್ಲಿ ಒಡೆದು ಪುನರ ನಿರ್ಮಾಣ ಮಾಡುತ್ತಿದ್ದಾರೆ ಎಂಬುವುದು ಸಾರ್ವಜನಿಕ ವಲಯದ ಆರೋಪವಾಗಿದೆ.
Kshetra Samachara
16/11/2020 09:58 pm