ಹುಬ್ಬಳ್ಳಿ- ಯಲ್ಲಾಪೂರ ಓಣಿಯ 18 ನಂ ಶಾಲೆಯ ಎದುರಿಗೆ, ಚರಂಡಿ ನೀರು ಮನೆಗೆ ನುಗ್ಗುತ್ತಿರುವ ಹಿನ್ನಲೆಯಲ್ಲಿ, ನಿಮ್ಮ ಪಬ್ಲಿಕ್ ನೆಕ್ಸ್ಟ್ ವರದಿಯನ್ನು ಬಿತ್ತರಿಸಿತ್ತು. ಈ ಕುರಿತು ಪಾಲಿಕೆ ಆಯುಕ್ತರಾದ ಸುರೇಶ ಇಟ್ನಾಳ ಅವರು ವರದಿಗೆ ಸ್ಪಂದಿಸಿದ್ದಾರೆ..
ಚರಂಡಿ "ಒಡೆದು ಮನೆಗೆ ನುಗ್ಗಿದ ನೀರು! ಪಾಲಿಕೆ ಅಧಿಕಾರಿಗಳ ವಿರುದ್ಧ ಗರಂ ಆದ ಯಲ್ಲಪೂರ ಓಣಿಯ ನಿವಾಸಿಗಳು" ಎಂಬ ಶೀರ್ಷಿಕೆಯಲ್ಲಿ ನಿಮ್ಮ ಪಬ್ಲಿಕ್ ನೆಕ್ಸ್ಟ್ ವರದಿಯನ್ನು ಬಿತ್ತರಿಸಿತ್ತು.
ಈಗ ಅದೇ ವರದಿಯನ್ನು ನಿಮ್ಮ ಪಬ್ಲಿಕ್ ನೆಕ್ಸ್ಟ್ ಫಾಲೋಪ್ ಮಾಡುತ್ತಿದೆ. ಚರಂಡಿ ನೀರು ಮನೆಗೆ ನುಗ್ಗಿ, ನಿವಾಸಿಗಳು ಮನೆ ಬಿಟ್ಟು ಹೊರಗೆ ಬರುವಂತಹ ಪರಿಸ್ಥಿತಿ ಎದುರಾಗಿತ್ತು. ಇದರ ಬಗ್ಗೆ ನಿಮ್ಮ ಪಬ್ಲಿಕ್ ನೆಕ್ಸ್ಟ್ ಸಂಪೂರ್ಣ ವರದಿಯನ್ನು ಮಾಡಿದ ನಂತರ. ಮಹಾನಗರ ಪಾಲಿಕೆ ಆಯುಕ್ತರು ಏನು ಹೇಳಿದ್ದಾರೆ ಕೇಳಿ...
ಹೀಗೆ ಪಾಲಿಕೆ ಆಯುಕ್ತರು, ಕೇವಲ ಆಶ್ವಾಸನೆ ನೀಡುತ್ತಾರೋ ಅಥವಾ ಆದಷ್ಟು ಬೇಗ ಸಮಸ್ಯೆ ಬಗೆ ಹರಿಸುತ್ತಾರೊ ಎಂಬುದನ್ನು ನೋಡಬೇಕಿದೆ......
Kshetra Samachara
11/11/2020 08:33 pm